`ಪ್ರಭಾವಶಾಲಿ ಯುವ ಭಾರತೀಯ’ ರಾಕಿಂಗ್​ ಸ್ಟಾರ್ ಯಶ್!

0
211

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಮುಡಿಗೆ ಮತ್ತೊಂದು ಕಿರೀಟ ಅಲಂಕರಿಸಿದೆ. ಕೆಜಿಎಫ್ ಬಳಿಕ ನ್ಯಾಷನಲ್ ಸ್ಟಾರ್ ಆಗಿರೋ ಯಶ್​ ಈಗ ಪ್ರಭಾವಶಾಲಿ ಯುವ ಭಾರತೀಯ!
ದಿ ಜಿಕ್ಯೂ ಇಂಡಿಯಾ ಆಯೋಜಿಸಿದ್ದ The GQ 50 Most Influential Young Indians ( ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು) ಪಟ್ಟಿಯಲ್ಲಿ ಯಶ್ ಸ್ಥಾನ ಪಡೆದಿದ್ದಾರೆ.
ವಿವಿಧ ಕ್ಷೇತ್ರದ ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿರೋ ವಿವಿಧ ಕ್ಷೇತ್ರದ ಸಾಧಕರಿಗೆ ಮುಂಬೈನಲ್ಲಿ ದಿ ಜಿಕ್ಯೂ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿತು. ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಯಶ್​ ಕೂಡ ಈ ವೇಳೆ ಸನ್ಮಾನಿಸಲ್ಪಟ್ಟರು. 50 ಕ್ಷೇತ್ರಗಳಲ್ಲಿ ಇಡೀ ಭಾರತೀಯ ಚಿತ್ರರಂಗದಿಂದ ಆಯ್ಕೆಯಾಗಿದ್ದು ನಮ್ಮ ಕನ್ನಡಿಗ ಯಶ್ ಮಾತ್ರ.

LEAVE A REPLY

Please enter your comment!
Please enter your name here