Saturday, May 21, 2022
Powertv Logo
Homeಸಿನಿಮಾಕೆಜಿಎಫ್​​ 2 ಸಿನಿಮಾ ಸಕ್ಸಸ್ : ನಿಮ್ಮ ಹೃದಯಗಳೇ ನನ್ನ ಜಗತ್ತು ; ಯಶ್​​

ಕೆಜಿಎಫ್​​ 2 ಸಿನಿಮಾ ಸಕ್ಸಸ್ : ನಿಮ್ಮ ಹೃದಯಗಳೇ ನನ್ನ ಜಗತ್ತು ; ಯಶ್​​

ಕೆಜಿಎಫ್ 2 ಸಿನಿಮಾ ವರ್ಲ್ಡ್​ವೈಡ್​ ಸೂಪರ್ ಹಿಟ್ ಆಗೋದ್ರ ಜೊತೆಗೆ ಕೋಟಿ ಕೋಟಿಯನ್ನು ಬಾಚಿಕೊಂಡು ಬಾಕ್ಸ್ ಆಫೀಸ್​ನಲ್ಲಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡ್ತಿದೆ. ಇದೀಗ ಸಿನಿಮಾ 1000 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.

ಕೆಜಿಎಫ್​ 2 ಚಿತ್ರ ಬಿಡುಗಡೆಯಾದ ನಂತ್ರ ಸದ್ಯ ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್​ ಯಶ್​ ವೀಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್​ಗಳಲ್ಲಿ ಶೇರ್ ಮಾಡಿದ್ದಾರೆ. ತಾವು ಬೆಳೆದು ಬಂದ ಹಾದಿ, ಸಾಮಾನ್ಯ ಹುಡುಗನಾಗಿದ್ದ ತಾವು ಇಷ್ಟು ದೊಡ್ಡ ಸ್ಟಾರ್ ಆಗಿದ್ರ ಬಗ್ಗೆ ಈ ವೀಡಿಯೋದಲ್ಲಿ ಮಾತನಾಡಿದ್ದಾರೆ. ಜೊತೆಗೆ ಕೆಜಿಎಫ್ 2 ಸಿನಿಮಾ ಸಕ್ಸಸ್ ಆಗಿರೋದಕ್ಕೆ ತಮ್ಮ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ನಿಮ್ಮ ಹೃದಯವೇ ನನ್ನ ಟೆರಿಟರಿ ಎಂದು ಪ್ರೀತಿಯಿಂದ ಹೇಳಿದ್ದಾರೆ.

KGF ಚಾಪ್ಟರ್‌-2 ಸಕ್ಸಸ್‌ ಬಳಿಕ ಯಶ್‌ ವಿಡಿಯೋ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದು ವಿಡಿಯೋದಲ್ಲಿ,  ಎಲ್ಲಾ ಕಡೆ ಬರಗಾಲ ಇದ್ದ ಕಡೆ ಹುಡುಗನೊಬ್ಬ ಕೊಡೆ ಹಿಡಿದು ಬಂದ. ಎಲ್ರೂ ಅದನ್ನು ಹುಚ್ಚುತನ ಅಂದ್ರು
ಮಳೆ ಜೋರಾಗಿ ಸುರಿದು, ಬರಗಾಲದ ಭೂಮಿಗೆ ತಂಪೆರಗಿತು. ಅದೆಲ್ಲಕ್ಕೂ ಕಾರಣ ಅವನಲ್ಲಿದ್ದ ನಂಬಿಕೆ. ಆ ನಂಬಿಕೆಯನ್ನು ನಿಜ ಮಾಡಿದ್ದೇನೆ.

KGF ಸಿನಿಮಾಗೆ ಅಭೂತಪೂರ್ವ ಪ್ರೀತಿ, ಪ್ರಶಂಸೆ, ಪ್ರತಿಕ್ರಿಯೆ ದೊರಕಿದೆ. ನಿಮಗೆ ಧನ್ಯವಾದ ಅನ್ನೋ ಪದ ಹೇಳಿದರೆ ಸಾಕಾಗದು. ನನ್ನ ಪಾಲಿಗೆ ನಿಮ್ಮೆಲ್ಲರ ಹೃದಯಗಳೇ ನನ್ನ ಜಗತ್ತು ಎಂದು ತಮ್ಮ ಅಭಿಮಾನವನ್ನು ತಿಳಿಸಿದರು.

- Advertisment -

Most Popular

Recent Comments