ಮಿನಿ ಚಿರತೆ ಎಂಬ ಶ್ವಾನ ರೋಬೊ! ಇದರ ಚಿಣ್ಣಾಟಕ್ಕೆ ಫಿದಾ ಆಗ್ದೇ ಇರೋರೇ ಇಲ್ಲ!

0
164

ವಿಜ್ಞಾನ -ತಂತ್ರಜ್ಞಾನ ಬೆಳೆಯುತ್ತಿದೆ. ಅದರಲ್ಲೂ ರೋಬೊಟಿಕ್ ತಂತ್ರಜ್ಞಾನವಂತೂ ದಿನೇ ದಿನೇ ಹೊಸತನದೊಂದಿಗೆ ಮಾರುಕಟ್ಟೆಯಲ್ಲಿ ಆಧಿಪತ್ಯ ಸ್ಥಾಪಿಸ್ತಿದೆ. ಈಗ ರೋಬೋ ಲೋಕದಲ್ಲಿ ರೋಬೋಟ್ ನಾಯಿಗಳು ಗಮನ ಸೆಳೆಯುತ್ತಿವೆ.

ನೀವು ಈ ಮೇಲಿನ ವಿಡಿಯೋವನ್ನು ನೋಡಿ, ತಣ್ಣನೆ ಗಾಳಿ, ಸುಂದರ ಉದ್ಯಾನವನ…ಉದರುವ ಎಲೆಗಳು. ಇಲ್ಲಿ ಆಡುವ ಪುಟಾಣಿ ಶ್ವಾನ ರೋಬೋಗಳು! ಪುಟ್ಟ ಪುಟ್ಟ ಕಾಲುಗಳಲ್ಲಿ ನೆಗೆಯುತ್ತಾ ಚಿಣ್ಣಾಟ ಆಡುವ ಇವುಗಳನ್ನು ನೋಡೋದೇ ಚಂದ. ಇವು ರೋಬೋಟ್​ ಜಗತ್ತಿನ ಹೊಸ ಸದಸ್ಯರು.
ಈ ಪುಟಾಣಿ ಶ್ವಾನ ರೋಬೋಗಳನ್ನು ಪರಿಚಯಿಸಿರೋದು ಅಮೆರಿಕಾದ ಮೆಸಾಚ್ಯೂಸೆಟ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ರೋಬ್ಯಾಟಿಕ್ಸ್ ಸ್ಕೂಲ್​.
ಹೌದು ಎಂಐಟಿ ಶ್ವಾನ ಮಾದರಿಯ ರೋಬೋವನ್ನು ತಯಾರಿಸಿದೆ. ಈ ರೋಬೋ ನಾಯಿಯಂತೆ ನಾಲ್ಕು ಕಾಲುಗಳಲ್ಲಿ ನಡೆಯುತ್ತೆ. ಉಲ್ಟಾ-ಪಲ್ಟಾ ಸಹ ಓಡಾಡುತ್ತೆ. ಬ್ಲಾಕ್​​ ಫ್ಲಿಪ್ ಕೂಡ ಮಾಡುತ್ತೆ! 20 ಫೌಂಡ್ ( 9 ಕೆಜಿ) ತೂಕವಿರೋ ಈ ರೋಬೋ ತಯಾರಿಕೆಗೆ 12 ಎಲೆಕ್ಟ್ರಿಕ್ ಮೋಟರ್​ಗಳನ್ನ ಬಳಸಿದ್ದಾರೆ.‘ ವೇಗಕ್ಕೆ ಹಾಗೂ ದಿಕ್ಕು ಬದಲಾವಣೆಗೆ ಮೂರು ಪತ್ಯೇಕ ಮೋಟರ್​ಗಳನ್ನು ಅಳವಡಿಸಲಾಗಿದೆ.
ಈ ರೋಬೋಗೆ ಮಿನಿ ಚಿರತೆ (ಮಿನಿ ಚೀತಾ) ಎಂದು ಹೆಸರಿಟ್ಟಿದ್ದಾರೆ. ಮಿನಿ ಚೀತಾದ್ದು ನಿಜಕ್ಕೂ ಚಿರತೆ ವೇಗ! ಸಾಮಾನ್ಯ ಮನುಷ್ಯಗಿಂತ ಎರಡುಪಟ್ಟು ವೇಗವಾಗಿ ಇದು ನಡೆಯುತ್ತಂತೆ.

LEAVE A REPLY

Please enter your comment!
Please enter your name here