Sunday, May 29, 2022
Powertv Logo
Homeಸಿನಿಮಾಕ್ರಿಸ್​ಮಸ್​ಗೆ 'ದರ್ಶನ' ನೀಡಿದ 'ರಾಬರ್ಟ್'!

ಕ್ರಿಸ್​ಮಸ್​ಗೆ ‘ದರ್ಶನ’ ನೀಡಿದ ‘ರಾಬರ್ಟ್’!

ಚಾಲೆಂಜಿಂಗ್​ ಸ್ಟಾರ್ ‘ರಾಬರ್ಟ್​’ ಗೆಟಪ್​​ನಲ್ಲಿ ದರ್ಶನ ಕೊಟ್ಟಿದ್ದಾರೆ. ಕ್ರಿಸ್​ಮಸ್ ಹಬ್ಬಕ್ಕೆ ಡಿ.ಬಾಸ್ ರಾಬರ್ಟ್ ಅವತಾರದ ಉಡುಗೊರೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೌದು, ಬಹು ನಿರೀಕ್ಷಿತ ರಾಬರ್ಟ್ ಸಿನಿಮಾದ ಫಸ್ಟ್​ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಡಿಫ್ರೆಂಡ್ ಹೇರ್​ಸ್ಟೈಲ್​​ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಜಾಕೆಟ್​, ಕತ್ತಿನಲ್ಲಿ ಶಿಲುಬೆಯ ಚೈನ್ , ಕೈಯಲ್ಲಿ ಗನ್ ಹಿಡಿದು ಹಿಂದೆಂದೂ ಕಾಣದ ಲುಕ್​ನಲ್ಲಿ ದಚ್ಚು ದರ್ಶನ ನೀಡಿದ್ದಾರೆ.
ತರುಣ್ ಸುಧೀರ್ ಆ್ಯಕ್ಷನ್​ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ದರ್ಶನ್​​ಗೆ ಜೋಡಿಯಾಗಿ ಆಶಾ ಭಟ್ ನಟಿಸುತ್ತಿದ್ದಾರೆ. ವಿನೋದ್ ಪ್ರಭಾಕರ್, ಜಗಪತಿ ಬಾಬು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಬಲ ಚಿತ್ರಕ್ಕಿದ್ದು, ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments