Home ಕ್ರೀಡೆ P.Cricket ರಿಷಭ್​ಗೆ ಎಚ್ಚರಿಕೆ ನೀಡಿದವರೇ ಬೆನ್ನಿಗೆ ನಿಂತಿದ್ದಾರೆ..!

ರಿಷಭ್​ಗೆ ಎಚ್ಚರಿಕೆ ನೀಡಿದವರೇ ಬೆನ್ನಿಗೆ ನಿಂತಿದ್ದಾರೆ..!

ರಿಷಭ್ ಪಂತ್…ಟೀಮ್ ಇಂಡಿಯಾದ ಯುವ ವಿಕೆಟ್​ ಕೀಪರ್, ಬ್ಯಾಟ್ಸ್​​ಮನ್. ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್​​ನಲ್ಲಿ ಸರಣಿ ಮಧ್ಯೆದಲ್ಲಿ ತಂಡವನ್ನು ಕೂಡಿ ಕೊಂಡಿದ್ದ ಪಂತ್ ನಿರೀಕ್ಷಿತ ಆಟವನ್ನು ಆಡುವಲ್ಲಿ ವಿಫಲರಾಗಿದ್ದರು. ಆದರೂ ಯುವ ಆಟಗಾರರನ್ನು ಕೇವಲ ಒಂದು ಸರಣಿಯ ಪ್ರದರ್ಶನದಿಂದ ಅಳೆದು-ತೂಗುವುದು ಬೇಡ ಅನ್ನೋ ಕಾರಣಕ್ಕೆ ಹಾಗೂ ಪಂತ್ ಟ್ಯಾಲೆಂಟ್ ಮೇಲಿನ ಭರವಸೆಯಿಂದ ವರ್ಲ್ಡ್​​ಕಪ್​ ನಂತರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನಕ್ಕೆ ಪಂತೇ ಸೂಕ್ತ ಎನ್ನುವುದು ಬಿಸಿಸಿಐ ಮಾತ್ರವಲ್ಲದೆ ಕ್ರಿಕೆಟ್ ಪಂಡಿತರ ಭವಿಷ್ಯ ಕೂಡ.
ವಿಶ್ವಕಪ್​ನಲ್ಲಿ ಎಡವಿದ್ದ ಪಂತ್ ವಿಂಡೀಸ್ ಟೂರ್​ನಲ್ಲೂ ಫಾರ್ಮ್​ಗೆ ಮರಳಲಿಲ್ಲ. ಆದರೂ ಇನ್ನೊಂದು ಅವಕಾಶ ಎಂಬಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮತ್ತೆ ಧೋನಿ ಅನುಪಸ್ಥಿತಿಯಲ್ಲಿ ಪಂತ್​ ಅವರನ್ನೇ ಆಯ್ಕೆ ಮಾಡಲಾಗಿತ್ತು. ಟಿ20ಯಲ್ಲಿ ಎಡವಿರುವ ಪಂತ್​ ಟೆಸ್ಟ್​​ನಲ್ಲಾದರೂ ತಮ್ಮ ಅಸಲಿ ಆಟ ಆಡಿ ಮಿಂಚುತ್ತಾರಾ ಕಾದು ನೋಡಬೇಕಿದೆ.
ಈ ನಡುವೆ ಪಂತ್​ಗೆ ಎಚ್ಚರಿಕೆ ನೀಡಿದ್ದವರೇ ಅವರ ಬೆನ್ನಿಗೆ ನಿಂತಿದ್ದಾರೆ..! ಪಂತ್ ಬದಲಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಬಂದಾಗ ಟೀಮ್ ಇಂಡಿಯಾ ಕೋಚ್​ ರವಿಶಾಸ್ತ್ರಿ, ಕೆಟ್ಟ ಹೊಡೆತಕ್ಕೆ ಯತ್ನಿಸಿ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಪಂತ್​ಗೆ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದರು. ಈಗ ಅದೇ ಶಾಸ್ತ್ರಿ ಯುವ ಕ್ರಿಕೆಟಿಗನ ಬೆನ್ನಿಗೆ ನಿಂತಿದ್ದಾರೆ.
ರಿಷಭ್​ ಪಂತ್​ಗೆ ಫಾರ್ಮ್​ಗೆ ಬರಲು ಅವಶ್ಯಕತೆ ಇರೋ ಅಷ್ಟು ಕಾಲಾವಕಾಶವನ್ನು ನೀಡಲಾಗುತ್ತೆ. ಪಂತ್ ಅನ್ನೋ ವ್ಯಕ್ತಿಯೇ ಬೇರೆ. ಆತ ಭಯಂಕರ ಗೆಲುವಿನ ರೂವಾರಿ ಆಗಲಿದ್ದಾರೆ. ಅವರಂಥಾ ಆಟಗಾರ ಸಿಗುವುದು ಕಮ್ಮಿ. ಹಾಗಾಗಿ ಅವರ ಬಗ್ಗೆ ಅಗಾಧ ತಾಳ್ಮೆ ಹೊಂದಿದ್ದೇವೆ ಅಂತ ಶಾಸ್ತ್ರಿ ಹೇಳಿದ್ದಾರೆ.
ರಿಷಭ್​ ವರ್ಲ್ಡ್​​ಕ್ಲಾಸ್ ಆಟಗಾರ. ಆತ ದೊಡ್ಡ ಘಾತುಕ ಆಟಗಾರ ಆಗ್ತಾನೆ ಅಂತ ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೆ ತಾವು ಈ ಹಿಂದೆ ಪಂತ್ ಬಗ್ಗೆ ಆಡಿದ ಮಾತುಗಳ ಬಗ್ಗೆ ಸ್ಪಷ್ಟನೆ ನೀಡಿದ ಶಾಸ್ತ್ರಿ, ಮೂರ್ಖತನದ ವರ್ತನೆ ತೋರಿದಾಗ ನಾನು ಎಚ್ಚರಿಸಲೇ ಬೇಕು ಎಂದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments