Saturday, May 28, 2022
Powertv Logo
Homeಸಿನಿಮಾಹೀಗಿದೆ ನೋಡಿ ರಿಷಭ್ ಶೆಟ್ಟಿ​​ 'ವರ್ಕ್​​ಫ್ರಮ್​​ ಹೋಮ್​'..!

ಹೀಗಿದೆ ನೋಡಿ ರಿಷಭ್ ಶೆಟ್ಟಿ​​ ‘ವರ್ಕ್​​ಫ್ರಮ್​​ ಹೋಮ್​’..!

ದೇಶದಲ್ಲಿ ‘ಕೊರೋನಾ ಎಮರ್ಜೆನ್ಸಿ’ ಇದೆ. ಮನೆಯಿಂದ ಹೊರಬರಲು ಜನ ಮೀನಾಮೇಷ ಎಣಿಸ್ತಿದ್ದಾರೆ. ವರ್ಕ್​​ಫ್ರಮ್ ಹೋಮ್ ಮೊರೆ ಹೋಗಿದ್ದಾರೆ. ಚಿತ್ರರಂಗದವರು ಕೂಡ ಸದ್ಯ ಬ್ರೇಕ್​ನಲ್ಲಿದ್ದಾರೆ. ನಿರ್ದೇಶಕ, ನಟ ರಿಷಭ್ ಶೆಟ್ಟಿ ತನ್ನ ಕುಟುಂದವರೊಂದಿಗೆ ಹುಟ್ಟೂರಲ್ಲಿ ಕಾಲಕಳೀತಾ ಇದ್ದಾರೆ.
ಮಗ ರನ್ವಿತ್​ ಶೆಟ್ಟಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸ್ತಿರೋ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರೋ ಅವರು, “ ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ! ಒಟ್ಟಾರೆ ಎಲ್ಲರ ತರ ನಮ್ದೂ ‘ವರ್ಕ್ ಫ್ರಂ ಹೋಂ’ ಜೋರಾಗ್ ನೆಡಿತಿದೆ. #Ranvitshetty” ಅಂದಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರೋ ನಟ ರಕ್ಷಿತ್ ಶೆಟ್ಟಿ, ” @shetty_rishab This is for you ನನ್ನ ಮುಗ್ಧತೆಯ ಅರಿವು ನನಗಿಲ್ಲ, ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ…” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments