Saturday, May 28, 2022
Powertv Logo
Homeಸಿನಿಮಾಪತ್ರದೊಡನೆ 200 ರೂ ಲಗತ್ತಿಸಿ ರಿಷಭ್​ಗೆ ಕಳುಹಿಸಿದ ಅಭಿಮಾನಿ..!

ಪತ್ರದೊಡನೆ 200 ರೂ ಲಗತ್ತಿಸಿ ರಿಷಭ್​ಗೆ ಕಳುಹಿಸಿದ ಅಭಿಮಾನಿ..!

ಇದು ಹೇಳಿ ಕೇಳಿ ಡಿಜಿಟಲ್ ಮೀಡಿಯಾ ಯುಗ..ಸಿನಿಮಾಗಳಿಗೂ ಈ ಡಿಜಿಟಲ್ ಫ್ಲಾಟ್​ ಫಾರ್ಮ್​ ತುಂಬಾ ಮುಖ್ಯವಾಗಿದೆ. ಆದ್ರೆ, ಎಲ್ಲೋ ಒಂದು ಕಡೆ ಸಿನಿಮಾ ರಿಲೀಸ್ ಆದ ಕೆಲವೇ ಕೆಲವು ದಿನಗಳಲ್ಲಿ ಡಿಜಿಟಲ್ ವೇದಿಕೆಗಳಿಗೆ ಲಗ್ಗೆ ಇಡೋದ್ರಿಂದ ಸಿನಿಮಾಗಳಿಗೆ ಒಂದರ್ಥದಲ್ಲಿ ಪೆಟ್ಟೇ.

 ಯಾರಪ್ಪಾ ಥಿಯೇಟರ್​ಗೆ ಹೋಗ್ತಾರೆ ಇನ್ನೇನು ಸ್ವಲ್ಪ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ, ಡಿಜಿಟಲ್ ಫ್ಲಾಟ್​​ಫಾರ್ಮ್​ಗಳಲ್ಲಿ ಸಿಗುತ್ತೆ. ಸುಮ್ನೆ ದುಡ್ ಕೊಟ್ ಯಾರ್ ನೋಡ್ತಾರೆ ಅನ್ನೋರೇ ಹೆಚ್ಚು. ಹಾಗೇ ಕನ್ನಡದ ಸೂಪರ್ ಹಿಟ್ ಮೂವಿಗಳಲ್ಲೊಂದಾದ  ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾವನ್ನೂ ಕೂಡ ಅನೇಕರು ನೋಡಿರೋದು ಡಿಜಿಟಲ್ ಫ್ಲಾಟ್​ಫಾರ್ಮ್​ಗಳಲ್ಲೇ!

ಹೀಗೆ ಡಿಜಿಟಲ್ ಮೀಡಿಯಾದಲ್ಲಿ  ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ನೋಡಿದ ಅಭಿಮಾನಿಯೊಬ್ಬರು.. ಛೇ ನಾನು ಈ ಸಿನಿಮಾನ ಇಷ್ಟು ದಿನ ಮಿಸ್ ಮಾಡ್ಕೊಂಡ್ನಲ್ಲಾ..? ಅಂತ ಬೇಜಾರು ಮಾಡ್ಕೊಂಡಿದ್ದಾರೆ… ಅಲ್ದೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಡೈರೆಕ್ಟರ್, ಆ್ಯಕ್ಟರ್ ರಿಷಭ್ ಶೆಟ್ಟಿಗೆ ಪತ್ರ ಬರೆದಿದ್ದಾರೆ.

ಹೌದು ತಡವಾಗಿ ಸಿನಿಮಾ ನೋಡಿದ, ಅದ್ರಲ್ಲೂ ಡಿಜಿಟಲ್ ಫ್ಲ್ಯಾಟ್​ ಫಾರ್ಮ್​​ನಲ್ಲಿ ನೋಡಿದ ತಪ್ಪಿಗೆ,ಪತ್ರದ ಜೊತೆ  200 ರೂ ಟಿಕೆಟ್ ಚಾರ್ಜ್​ ರೀತಿಯಲ್ಲಿ ಲಗತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಮೈಸೂರಿನ ಭರತ್ ರಾಮಸ್ವಾಮಿ ಅನ್ನೋರು ಬರೆದಿರೋ ಆ ಪತ್ರವನ್ನು, ಅವರು ಲಗತ್ತಿಸಿರೋ ಟಿಕೆಟ್ ಬಾಬ್ತು ಹಣದ ಫೋಟೋವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ರಿಷಭ್ ಶೆಟ್ಟಿ.

ನಾವು ನಿರ್ಮಿಸಿದ ಸಿನಿಮಾವೊಂದು ಅದೆಷ್ಟೇ ಪ್ರಶಸ್ತಿಗಳನ್ನ ಪಡೆದಿದ್ರೂ  ಕೂಡ  ಜನಮಾನಸದಿಂದ ಬರುವ ಪ್ರಶಂಸೆಯ ಮುಂದೆ ಅವೆಲ್ಲಾ ನಗಣ್ಯ ಅನಿಸುತ್ತವೆ. ಜನರಿಂದ ಬಂದ ಈ ಅಭಿಮಾನದ ಕುರುಹುಗಳು, ಮಾತುಗಳು  ಅವರೊಡನೆ ನಮ್ಮನ್ನು ಭಾವನಾತ್ಮಕವಾಗಿ ಬೆಸೆಯುತ್ತವೆ ಅಂತ ರಿಷಭ್ ಖುಷಿಯಿಂದ ಹೇಳಿಕೊಂಡಿದ್ದಾರೆ.

ಅಲ್ದೆ ಅದ್ರಲ್ಲೂ ಚಿತ್ರವನ್ನು ತಡವಾಗಿ ವೀಕ್ಷಿಸಿದ್ರೂ ಮೆಚ್ಚಿ ಪ್ರೋತ್ಸಾಹಿಸುವ ಇಂತಹ ಚಿತ್ರಪ್ರೇಮಿಗಳಿರುವಾಗ ಒಳ್ಳೆಯ ಕನ್ನಡ ಸಿನಿಮಾಗಳಿಗೆ ಯಾವತ್ತಿಗೂ ಸೋಲಿಲ್ಲ. ಯಾಕಂದ್ರೆ ಪ್ರೇಕ್ಷಕರ ಒಲವೇ ಒಂದು ಸಿನಿಮಾದ ನಿಜವಾದ ಗೆಲುವು. ಇಡೀ ಚಿತ್ರತಂಡದ ಪರವಾಗಿ ಭರತ್ ರಾಮಸ್ವಾಮಿ ಅವರಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ” ಅಂತ ಶೆಟ್ರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು  ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ 2018ರಲ್ಲಿ ತೆರೆಕಂಡು ಸಾಕಷ್ಟು ಜನಪ್ರಿಯತೆಯನ್ನು ಮಾತ್ರವಲ್ಲದೆ ರಾಷ್ಟ್ರ – ರಾಜ್ಯ ಪ್ರಶಸ್ತಿಗೂ ಭಾಜನವಾಗಿತ್ತು. ಇಂದಿಗೂ ಆ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಭರತ್ ರಾಮಸ್ವಾಮಿ ಪತ್ರ ಚಿತ್ರದ ಯಶಸ್ಸಿಗೆ ಮತ್ತೊಂದು ಸಾಕ್ಷಿಯಷ್ಟೇ.

LEAVE A REPLY

Please enter your comment!
Please enter your name here

- Advertisment -

Most Popular

Recent Comments