Monday, August 15, 2022
Powertv Logo
Homeರಾಜ್ಯಸುದ್ದಿಗೋಷ್ಟಿಯಲ್ಲಿ ರೇವಣ್ಣ ತರಾಟೆ

ಸುದ್ದಿಗೋಷ್ಟಿಯಲ್ಲಿ ರೇವಣ್ಣ ತರಾಟೆ

ಹಾಸನ: ಕರ್ನಾಟಕದಲ್ಲಿರುವ ಏಕಮೇವ ಪ್ರಾದೇಶಿಕ ಪಕ್ಷವಾದ ಜೆಡಿಎಸ್​ನ ಉನ್ನತ ನಾಯಕರಲ್ಲಿ ಒಬ್ಬರಾದ ರೇವಣ್ಣ ಇಂದು ಹಾಸನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ತಮ್ಮ ಪಕ್ಷವನ್ನು ಕುಟುಂಬ ರಾಜಕಾರಣದ ಪಕ್ಷ ಎನ್ನುವುದನ್ನು ತೀವ್ರವಾಗಿ ವಿರೋಧಿಸಿದ ರೇವಣ್ಣ, ಬೆಳಿಗ್ಗೆಯಾದರೆ ಸಾಕು ಪ್ರಾದೇಶಿಕ ಪಕ್ಷದ ಅಭ್ಯರ್ಥಿಯ ಮೇಲೆ ಟೀಕೆ ಮಾಡುತ್ತಾರೆ, ನಮ್ಮದು ಕುಟುಂಬ ರಾಜಕಾರಣ ಎನ್ನುತ್ತಾರೆ. ಆದರೆ ಕಾಂಗ್ರೆಸ್​ನಲ್ಲಿ ಒಬ್ಬೊಬ್ಬರ ಕುಟುಂಬದಲ್ಲಿ ನಾಲ್ಕು ನಾಲ್ಕು ಜನ ರಾಜಕಾರಣ ಮಾಡುತ್ತಿದ್ದಾರೆ. ಅದನ್ನು ಯಾಕೆ ಯಾರೂ ಮಾತನಾಡಲ್ಲ? ಕಾಂಗ್ರೆಸ್​ನವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ, ಕುಟುಂಬ ರಾಜಕಾರಣ ಇರಬಾರದು ಅಂದರೆ ಸಂಸತ್ತಿನಲ್ಲಿ ಆ ಬಗ್ಗೆ ಒಂದು ಮಸೂದೆ ತರಲಿ ಎಂದು ಟೀಕಿಸಿದರು.

ಎರಡೂ ಪಕ್ಷದವರು ಹಾಸನ ಜಿಲ್ಲೆಗೆ ಮಾಡಿರುವುದಾದರೂ ಏನು? ಹಾಗೆ ನೋಡಿದರೆ ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು. ಆದರೆ ಅವುಗಳ ಕೊಡುಗೆ ಮಾತ್ರ ಏನೂ ಇಲ್ಲ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಎರಡೂ ಪಕ್ಷದವರು ದುಡ್ಡಿನಿಂದ ರಾಜಕೀಯ ಮಾಡಲು ಹೊರಟಿದ್ದಾರೆ. ಎರಡೂ ಪಕ್ಷಗಳೂ ರೈತರಿಗೆ ದ್ರೋಹ ಬಗೆದಿವೆ. ಬಿಜೆಪಿ ಅಂದ್ರೆ ಅಭಿವೃದ್ಧಿ ತಡೆಹಿಡಿಯುವ ಪಕ್ಷ. ಲೂಟಿಕೋರರ ಕೈಗೆ ಸರ್ಕಾರ ಹೋಗಿದೆ. ಕೇಂದ್ರ ಸಚಿವರು ಉದ್ಘಾಟನೆ ಮಾಡಿದ್ದನ್ನು ರಾಜ್ಯದವರು ತಡೆಹಿಡಿದಿದ್ದಾರೆ. ನಾನು ಸಕಲೇಶಪುರದ ರಸ್ತೆಗಾಗಿ 200 ಕೋಟಿ ಬರುವಂತೆ ಮಾಡಿದ್ದೇನೆ. ಧರ್ಮಸ್ಥಳಕ್ಕೆ ನಾಲ್ಕುಪಥದ ರಸ್ತೆ ಮಾಡಿದ್ದೇನೆ. ಶೃಂಗೇರಿಗೂ ರಸ್ತೆ ಮಾಡಿದ್ದೇನೆ. ಸಚಿವನಾಗಿ ನನ್ನ ಶಕ್ತಿ ಮೀರಿದ ಕೆಲಸವನ್ನು ಮಾಡಿದ್ದೇನೆ ಎಂದು ತಮ್ಮ ಸಾಧನೆಯನ್ನೂ ಸಹ ಹೇಳಿಕೊಂಡರು.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments

s