ಚಿತ್ರದುರ್ಗ: ಅವರು ವೃತ್ತಿಯಲ್ಲಿ ಶಿಕ್ಷಕರು, ಎಲ್ಲಿ ಹಾವುಗಳು ಕಂಡು ಬಂದರೆ ಅಥವಾ ಹಾವು ಬಂದಿರೋ ಮಾಹಿತಿ ಸಿಕ್ಕರೆ ಅಲ್ಲಿಗೆ ಹೋಗಿ ಹಾವುನ್ನು ಹಿಡಿದು ನಿರ್ಜನ ಪ್ರದೇಶದಲ್ಲಿ ಬಿಡುತ್ತಾರೆ.ಇಂತಹ ಹವ್ಯಾಸ ವನ್ನು ರೂಡಿಸಿ ಕೊಂಡಿದ್ದಾರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜಡೆಗೊಂಡನಹಳ್ಲಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಶ್ರೀದರ್ ರವರು.
ಹಲವಾರು ವರುಷಗಳಿಂದ ಹಾವುಗಳನ್ನು ಹಿಡಿಯುವ ಹವಾಸ್ಯವನ್ನು ಬೆಳಿಸಿಕೊಂಡ ಶಿಕ್ಷಕ ಶ್ರೀದರ್ ರವರು ಜಡೆಗೊಂಡನಹಳ್ಲಿ ಸುತ್ತಮುತ್ತಲಿನ ಗ್ರಾಮದಲ್ಲಿ ಹಾವುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.