ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಧಾರ್ಮಿಕ ವಿಷಯ ಬಂದಾಗ ಸಮಾಧಾನದಿಂದ ಇರಬೇಕು. ಧಾರ್ಮಿಕ ವಿಚಾರಗಳಲ್ಲಿ ಸಾಕಷ್ಟು ಫೇಕ್ ಇರುತ್ತೆ ಎಲ್ಲ ಜಾತಿ ಧರ್ಮದವರು ಕೂಲಂಕಷವಾಗಿ ವಿಚಾರ ಮಾಡಿ ರಿಯಾಕ್ಟ್ ಮಾಡಬೇಕು ಎಂದರು.
ಹುಬ್ಬಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ ಎಂದು ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ರೇಣುಕಾಚಾರ್ಯಗೆ ಮಾಡೋಕೆ ಕೆಲಸ ಇಲ್ಲ, ಫೇಕ್ ಮಾಡೋರು ಬಿಜೆಪಿ IT ಸೆಲ್ನವರು ಎಂದು ಆರೋಪ ಮಾಡಿದ್ದಾರೆ.