Home ರಾಜ್ಯ ಮನೆಗೆ ರಾಮಕೃಷ್ಣ ಹೆಗಡೆ ನಿವಾಸ, ಜೆ ಎಚ್ ಪಟೇಲ್ ನಿವಾಸ ಎಂದು ಹೆಸರಿಟ್ಟ ಬಿಜೆಪಿ ಸಂಸದ!

ಮನೆಗೆ ರಾಮಕೃಷ್ಣ ಹೆಗಡೆ ನಿವಾಸ, ಜೆ ಎಚ್ ಪಟೇಲ್ ನಿವಾಸ ಎಂದು ಹೆಸರಿಟ್ಟ ಬಿಜೆಪಿ ಸಂಸದ!

ಜಯಪುರ: ಮಾಜಿ ಕೇಂದ್ರ ಸಚಿವ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ತಾವು ಕಟ್ಟಿಸಿರುವ ಹೊಸ ಮನೆಗೆ ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಹೆಗಡೆ-ಪಟೇಲ್ ನನ್ನ ಪಾಲಿಗೆ ಮಹಾನಾಯಕರು. ಅವರ ಸ್ಮರಣೆಗಾಗಿ, ನಾನು ನನ್ನ ಸ್ವತಃ ಶ್ರಮದಿಂದ ಕಟ್ಟಿಸಿರುವ ಮನೆಗೆ ಮಹಾನಾಯಕರ ಹೆಸರನ್ನು ನಾಮಕರಣ ಮಾಡಿದ್ದೇನೆ ಎಂದರು. ಇಬ್ಬರೂ ನಾಯಕರು ತಮ್ಮ ಮಕ್ಕಳಿಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟರೂ, ಇಲ್ಲವೊ ಗೊತ್ತಿಲ್ಲ. ಆದರೆ, ನನಗೆ ರಾಜಕಾರಣದಲ್ಲಿ ಪ್ರೀತಿ ಕೊಟ್ಟಿದ್ದಾರೆ. ಹೀಗಾಗಿ ಇಬ್ಬರು ಮಹಾಶಯರ ಹೆಸರನ್ನು ಹೊಸ ಮನೆಗೆ ನಾಮಕರಣ ಮಾಡಿದ್ದೇನೆ ಎಂದರು. ಹೊಸ ಮನೆ ನಿರ್ಮಿಸಿ ಆರೇಳು ತಿಂಗಳಾಗಿತ್ತು. ಇಂದು ರಾಮಕೃಷ್ಣ ಹೆಗಡೆ ಅವರ ಜನುಮ ದಿನವಾದ ಕಾರಣ ಒಳ್ಳೆಯ ದಿನವೆಂದು ಪೂಜೆ ಮಾಡಿ, ನಾಮ ಫಲಕ ಅಳವಡಸಿದ್ದೇನೆ. ಮುಂದಿನ ದಿನಗಳಲ್ಲಿ ಶಿಲೆಯಲ್ಲಿ ಇಬ್ಬರ ಹೆಸರನ್ನು ಕೆತ್ತಿಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಿ ಎಂದು...

‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

ಹುಬ್ಬಳ್ಳಿ: ಪುಣಾ-ಬೆಂಗಳೂರ ಬೈಪಾಸ್ ರಸ್ತೆಯು ಕಿರಿದಾಗಿದ್ದು, ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗಬ್ಬೂರು ಬೈಪಾಸ್ ಗೆ...

ಜ. 26 ರಂದು ಪರ್ಯಾಯ ರೈತ ಗಣರಾಜ್ಯೋತ್ಸವ ಪರೆಡ್: ಶಾಂತಕುಮಾರ

ಹುಬ್ಬಳ್ಳಿ : ದೆಹಲಿ ರೈತರ ಹೋರಾಟ ಬೆಂಬಲಿಸಿ ಜ. 26 ರಂದು ರೈತರ ಪರ್ಯಾಯ ಗಣರಾಜ್ಯೋತ್ಸವ ಪರೆಡ್ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ , ಮೋಟಾರ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ...

‘ಠಾಕ್ರೆ ಟ್ವೀಟ್ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ’

ಬೆಂಗಳೂರು: ಮಾಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಉದ್ದವ್ ಠಾಕ್ರೆ ಭೂತದಹನ...

Recent Comments