ರಿಲಯನ್ಸ್ ವೇರ್ ಹೌಸ್​ಗೆ ಬೆಂಕಿ

0
246

ಬೆಂಗಳೂರು : ನೆಲಮಂಗಲದಲ್ಲಿ ಭಾರೀ ಅಗ್ನಿ ಅವಘಢವೊಂದು ಸಂಭವಿಸಿದೆ. ಮಾದನಾಯಕನಹಳ್ಳಿಯ ಸಿದ್ದನ ಹೊಸಹಳ್ಳಿ ಗ್ರಾಮದಲ್ಲಿ ರಿಲಯನ್ಸ್ ವೇರ್ ಹೌಸ್​ಗೆ ಬೆಂಕಿ ತಗುಲಿದೆ, ಮೊಬೈಲ್ ಟವರ್​ಗೆ ಸಂಬಂಧಿಸಿದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಲಕರಣೆಗಳು ಭಸ್ಮವಾಗಿದೆ. ಅದೃಷ್ಟವಶಾತ್ ಯಾವ್ದೇ ಪ್ರಾಣಾಪಾಯವಾಗಿಲ್ಲ.
ದೇವನಹಳ್ಳಿಯಲ್ಲಿ ನಡೆಯುತ್ತಿರುವ ಏರ್​ ಶೋಗೆ ನಿಯೋಜನೆಗೊಂಡಿದ್ದ 10 ಅಗ್ನಿ ಶಾಮಕ ದಳದ ವಾಹನಗಳಿಂದ ಅಗ್ನಿ ನೊಂದಿಸುವ ಕಾರ್ಯ ಯಶಸ್ವಿಯಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಮತ್ತು 70 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಸತತವಾಗಿ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣವಾಗಿದೆ. ಮಾದನಾಯಕನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here