Tuesday, September 27, 2022
Powertv Logo
Homeದೇಶದೇಶಾದ್ಯಂತ ಬರಲಿವೆ ಜಿಯೋ ಪೆಟ್ರೋಲ್ ಬಂಕ್!

ದೇಶಾದ್ಯಂತ ಬರಲಿವೆ ಜಿಯೋ ಪೆಟ್ರೋಲ್ ಬಂಕ್!

ನವದೆಹಲಿ: ಟೆಲಿಕಾಂ ಕ್ಷೇತ್ರವನ್ನು ಹೊಸ ಆಯಾಮದತ್ತ ಕೊಂಡು ಹೋಗಿದ್ದ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪೆನಿ ಇದೀಗ ಜಿಯೋ-ಬಿಪಿ ಹೆಸರಲ್ಲಿ ಪೆಟ್ರೋಲ್ ಬಂಕ್​​​​ಗಳ ಸ್ಥಾಪನೆಗೆ ಮುಂದಾಗಿದೆ.

ಉಚಿತ ಕರೆ ಹಾಗೂ ಅಗ್ಗದ ಬೆಲೆಗೆ ಇಂಟರ್​ನೆಟ್ ಸೇವೆಯನ್ನುನೀಡುವ ಮೂಲಕ ಎಲ್ಲರ ಕೈ ಸೇರಿದ್ದ ಜಿಯೋ ಇದೀಗ ಇಂಧನ ಕ್ಷೇತ್ರಕ್ಕೆ ಕಾಲಿಡಲು ಮುಂದಾಗಿದೆ. ಅದಕ್ಕಾಗಿ ಬ್ರಿಟನ್ ಮೂಲದ ಬಿಪಿ ಸಂಸ್ಥೆ ಜಿಯೋ ಪೆಟ್ರೋಲ್ ಪಂಪ್​ಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದು, ಈ ಸಂಸ್ಥೆಯೊಡನೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜೊತೆಗೂಡಿ ಮುಂದಿನ ಐದು ವರ್ಷದಲ್ಲಿ ದೇಶಾದ್ಯಂತ 4000ಕ್ಕೂ ಹೆಚ್ಚು ಪೆಟ್ರೋಲ್ ಪಂಪ್​ಗಳ ಸ್ಥಾಪನೆಗೆ ಮುಂದಾಗಿವೆ.

ಈಗಾಗಲೇ 1400 ರಿಲಯನ್ಸ್ ಬಂಕ್​​ಗಳಿದ್ದು, ಇದರ ಸಂಖ್ಯೆ 5500ಕ್ಕಿಂತ ಹೆಚ್ಚಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ನಗರ ಪ್ರದೇಶಗಳಲ್ಲಿ ಜಿಯೋ-ಬಿಪಿ  ಪೆಟ್ರೋಲ್ ಪಂಪ್​ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದರಿಂದ ಹೆದ್ದಾರಿಗಳಲ್ಲಿನ ಸರ್ಕಾರಿ ಸ್ವಾಮ್ಯದ ಬಿಪಿಸಿಎಎಲ್ ಹಾಗೂ ನಗರ ಪ್ರದೇಶ ವ್ಯಾಪ್ತಿಯ ಎಚ್​ಪಿಸಿಎಲ್​ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.  

13 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments