Home ರಾಜ್ಯ ‘ಡೀಸೆಲ್ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ’

‘ಡೀಸೆಲ್ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ’

ಶಿವಮೊಗ್ಗ: ಪ್ರತಿದಿನ ತಮ್ಮ ಲಾರಿಗಳ ಡೀಸೆಲ್ ಮತ್ತು ಇತರೆ ಬೆಲೆ ಬಾಳುವ ವಸ್ತುಗಳ ಕಳ್ಳತನವಾಗುತ್ತಿದ್ದುದ್ದಕ್ಕೆ ಬೇಸತ್ತಿದ್ದ ಲಾರಿ ಮಾಲೀಕರು, ಆ ದುಷ್ಕರ್ಮಿಗಳ ಬಲೆಗೆ ಸಿಸಿಟಿವಿ ಮೊರೆ ಹೋಗಿದ್ದರು.  ಮತ್ತೇನು ಅಂದು ರಾತ್ರಿಯೇ ಡೀಸೆಲ್ ಕಳ್ಳ ಸಿಕ್ಕಿ ಬಿದ್ದಿದ್ದಾನೆ.

ಶಿವಮೊಗ್ಗದ ಮಂಡ್ಲಿ ಬಡಾವಣೆಯಲ್ಲಿ ಬಹಳಷ್ಟು ಗ್ಯಾರೇಜ್ ಗಳಿದ್ದು, ಇಲ್ಲಿ ಕೆಲ ದಿನಗಳಿಂದ ಡೀಸೆಲ್ ಮತ್ತು ಲಾರಿಗಳ ಹಾಗೂ ಇತರೆ ವಾಹನಗಳ ಬೆಲೆಬಾಳುವ ವಸ್ತುಗಳ ಕಳ್ಳತನವಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿತ್ತು.  ಇದರಿಂದ ಕೋಪಗೊಂಡ ಹೋಗಿದ್ದ ಲಾರಿ ಮಾಲೀಕರು, ಸಿಸಿ ಟಿವಿ ಮೊರೆ ಹೋಗಿದ್ದು, ಡೀಸೆಲ್ ಕಳ್ಳತನ ಮಾಡುತ್ತಿದ್ದವನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. 

ಅರ್ಧರಾತ್ರಿಯಲ್ಲಿ ನೀಲಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳ ದೊಡ್ಡ ಕ್ಯಾನ್ ನಲ್ಲಿದ್ದ ಡೀಸೆಲ್ ಕಳ್ಳತನಕ್ಕೆ ಯತ್ನಿಸಿದ್ದಾನೆ.  ಈ ವೇಳೆ ದಾಳಿ ಮಾಡಿರುವ ಲಾರಿ ಮಾಲೀಕರು ಮತ್ತಿತರರು, ಕಳ್ಳನನ್ನು ಸ್ಪಾಟ್ ನಲ್ಲೇ ಹಿಡಿಯಲು ಯತ್ನಿಸಿದ್ದಾರೆ.  ಬಳಿಕ ಕಳ್ಳ ಓಡಿ ಹೋಗಲು ಯತ್ನಿಸಿದ್ದು, ಆಗ ಕಳ್ಳನ ಕಾಲು ಉಳುಕಿದೆ.  ಈ ವೇಳೆ ನೋವಿನಿಂದ ಬಿದ್ದ ಕಳ್ಳನಿಗೆ ಹಿಡಿದು, ಸ್ಥಳೀಯರು ಅರ್ಧರಾತ್ರಿಯೇ ಸಕತ್ ಗೂಸಾ ಕೊಟ್ಟಿದ್ದಾರೆ.  ಬಳಿಕ ತುಂಗಾನಗರ ಪೊಲೀಸ್ ಠಾಣೆಗೆ ಕಳ್ಳನನ್ನು ಒಪ್ಪಿಸಿದ್ದಾರೆ. 

ಅಲ್ಲದೇ, ಈ ಭಾಗದಲ್ಲಿ ಕಳ್ಳರ ದೊಡ್ಡ ಗ್ಯಾಂಗೇ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.  ಪೊಲೀಸರು, ಸೂಕ್ತ ಪರಿಶೀಲನೆ ನಡೆಸಿ, ಕಳ್ಳರ ಗ್ಯಾಂಗ್ ಪತ್ತೆ ಹಚ್ಚಬೇಕೆಂದು ಮನವಿ ಕೂಡ ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments