Home ರಾಜ್ಯ 'ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ: ಸ್ಲೀಪರ್, ವೋಲ್ವೋ ಮತ್ತು ರಾಜಹಂಸ ಬಸ್ಸುಗಳ ಹೆಚ್ಚಳ'

‘ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ: ಸ್ಲೀಪರ್, ವೋಲ್ವೋ ಮತ್ತು ರಾಜಹಂಸ ಬಸ್ಸುಗಳ ಹೆಚ್ಚಳ’

ಹುಬ್ಬಳ್ಳಿ: ಕೋವಿಡ್-19  ಲಾಕ್ ಡೌನ್ ನಂತರ ದಿನ ಕಳೆದಂತೆ ದೂರ ಮಾರ್ಗದ ಬಸ್ ಗಳ  ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಪಿಂಪ್ರಿ, ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು  ಸ್ಲೀಪರ್, ವೋಲ್ವೊ ಮತ್ತು ರಾಜಹಂಸ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ.

ಈ ಬಸ್ ಗಳ  ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾಸಂಸ್ಥೆ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ವಿವಿಧ ಸ್ಥಳಗಳಿಗೆ ಹೊರಡುವ ಬಸ್ಸುಗಳ  ಸಾರಿಗೆ ವರ್ಗ, ಹೊರಡುವ ಸಮಯ, ಮಾರ್ಗ ಹಾಗೂ ಪ್ರಯಾಣ ದರದ ವಿವರಗಳು ಕೆಳಕಂಡಂತಿದೆ.

ಮುಂಗಡ ಬುಕ್ಕಿಂಗ್,ರಿಯಾಯಿತಿ: ಈ ಬಸ್ಸುಗಳಿಗೆ ಆನ್ ಲೈನ್, ಮತ್ತು ಮುಂಗಡ ಬುಕ್ಕಿಂಗ್ ಕೌಂಟರುಗಳ ಮೂಲಕ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. 4 ಅಥವಾ 4 ಕ್ಕಿಂತ ಹೆಚ್ಚು ಆಸನಗಳಿಗೆ ಒಂದೇ ಟಿಕೆಟ್ ಪಡೆದುಕೊಂಡರೆ ಮೂಲ ಪ್ರಯಾಣದರದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವಾಗಿನ ಮತ್ತು ಬರುವಾಗಿನ ಪ್ರಯಾಣಕ್ಕೆ ಒಟ್ಟಿಗೆ ಟಿಕೆಟ್ ಪಡೆದರೆ ಬರುವಾಗಿನ ಪ್ರಯಾಣಕ್ಕೆ ಮೂಲ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ಸಿಗುತ್ತದೆ.

ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ನೆರೆಯ ರಾಜ್ಯಗಳಿಗೆ ವೋಲ್ವೊ,ಸ್ಲೀಪರ್,ರಾಜಹಂಸ ಹಾಗೂ ವೇಗದೂತ ಬಸ್ಸುಗಳು ಸೇರಿದಂತೆ ಒಟ್ಟು 65 ಬಸ್ಸುಗಳು ಸಂಚರಿಸುತ್ತಿದ್ದವು. ಲಾಕ್ ಡೌನ್ ನಂತರದಲ್ಲಿ ಹಂತ ಹಂತವಾಗಿ 53 ಬಸ್ಸುಗಳ ಸಂಚಾರವನ್ನು  ಮರು ಪ್ರಾರಂಭಿಸಲಾಗಿತ್ತು. ಈಗ ಮತ್ತೆ ಹತ್ತು ಬಸ್ಸುಗಳನ್ನು ಪುನಾರಂಭಿಸಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಗದಗನಲ್ಲಿ ಕಾಲೇಜ್ ಓಪನ್ ರೂಲ್ಸ್ ಬ್ರೇಕ್’

ಗದಗ: 10 ತಿಂಗಳ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಸಂಪೂರ್ಣ ಆರಂಭವಾಗಿವೆ. ಆದರೆ ಗದಗ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸರ್ಕಾರದ ಕೊರೋನಾ ರೂಲ್ಸ್ ಗಳು ಪಾಲನೆ ಆಗುತ್ತಿಲ್ಲ. ಚಿಕ್ಕ...

‘ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆ’

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯಲ್ಲಿ ಕೂಡ ನಿಧಿ ಸಂಗ್ರಹಣೆ ಕಾರ್ಯ ನಡೆಯಿತು. ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆಗೆ ಮುಂದಾಗಿದ್ದಾರೆ. ನಗರದ ಜೋಡು ಮಾರುತೇಶ್ವರ ದೇವಸ್ಥಾನದಲ್ಲಿ...

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವದು ಏಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ...

‘ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣ ಶಿಲಾನ್ಯಾಸ’

ಹುಬ್ಬಳ್ಳಿ: 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ...

Recent Comments