ಅಂಬಿ ಹೃದಯವಾಸಿಗಳಿಗೆ ಕುಟುಂಬದ ಆಹ್ವಾನ !

0
751

ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ನವೆಂಬರ್ 24ಕ್ಕೆ ಒಂದು ವರ್ಷ. ಪಂಚಾಗ/ ತಿಥಿ ಪ್ರಕಾರ ನಾಳೆಯೇ ಅಂಬಿ ವರ್ಷದ ಪುಣ್ಯತಿಥಿಯನ್ನು ಆಚರಿಸಲು ಕುಟುಂಬದವರು ನಿರ್ಧರಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಪುಣ್ಯತಿಥಿಗೆ ಕುಟುಂಬ ಅಭಿಮಾನಿಗಳು, ಮಾಧ್ಯಮದವರು, ಸ್ನೇಹಿತರು, ಸಂಬಂಧಿಕರು, ಚಿತ್ರರಂಗದವರನ್ನು ಆಹ್ವಾನಿಸಿದೆ.
`ಸ್ನೇಹಜೀವಿ ಸ್ಮರಣಾರ್ಥ ಆಹ್ವಾನ…ಸ್ನೇಹ ಸಾಗರ -ಪ್ರೀತಿ ಅಜರಾಮರ ಎಂಬುದನ್ನು ವಿಶ್ವಕ್ಕೆ ಸಾರಿದ ಈ ಮಣ್ಣಿನ ಹೆಮ್ಮೆಯ ಮಗ ಅಂಬರೀಶ್ ಅವರ ಪುಣ್ಯ ಸ್ಮರಣೆಯ ದಿನವಿದು. ಅವರ ಹೃದಯವಾಸಿಗಳಾದ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ’ ಎಂದು ಅಂಬಿ ಕುಟುಂಬ ಆಮಂತ್ರಣ ನೀಡಿದೆ. ಅರಮನೆ ಮೈದಾನದ ಗೇಟ್ ನಂಬರ್ 4ರ ವೃಕ್ಷ ಹಾಲ್​, ಗಾಯತ್ರಿ ವಿಹಾರ್​ನಲ್ಲಿ ಪುಣ್ಯತಿಥಿ ನಡೆಯುತ್ತದೆ.

LEAVE A REPLY

Please enter your comment!
Please enter your name here