ಐಪಿಎಲ್ನಲ್ಲಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತೀವ್ರ ಕುತೂಹಲ ಮೂಡಿಸಿದೆ.
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ RCB ತಂಡ ಫಾಫ್ ಡು ಪ್ಲೆಸಿಸ್ 96 ರನ್,64 ಎಸೆತ,11 ಬೌಂಡರಿ, 2 ಸಿಕ್ಸರ್ ಸಾಹಸಿಕ ಬ್ಯಾಟಿಂಗ್ನಿಂದಾಗಿ 6 ವಿಕೆಟ್ಗೆ 181 ಮೊತ್ತ ಬಾರಿಸಿತು. ಸ್ಲಾಗ್ ಓವರ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎಚ್ಚರಿಕೆಯ ದಾಳಿ ನಡೆಸಿ ಆರ್ಸಿಬಿ ತಂಡವನ್ನು ಕಟ್ಟಿ ಹಾಕಿತು. ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಗುರಿ ಮುಟ್ಟುವಲ್ಲಿ ವಿಫಲವಾಗಿ ಆರ್ಸಿಬಿ ತಂಡಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ.
182 ರನ್ ಗುರಿ ಬೆನ್ನತ್ತಿ ಆರಂಭಿಕ ಆಟಗಾರರಾಗಿ ಡಿ ಕಾಕ್ ಹಾಗೂ ಕೆ.ಎಲ್ ರಾಹುಲ್ ಕಣಕ್ಕೆ ಇಳಿದರು. ಗ್ರೌಂಡ್ಗೆ ಬಂದ ವೇಗದಲ್ಲೇ ಡಿ ಕಾಕ್ ಮ್ಯಾಕ್ಸ್ವೆಲ್ಗೆ ಕ್ಯಾಚ್ ನೀಡಿ ಔಟಾದರು. ಇದಾದ ಬಳಿಕ ಸ್ಕ್ರೀಜ್ಗೆ ಬಂದ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಕೂಡ ಹೆಚ್ಚು ಹೊತ್ತು ಸ್ಕ್ರೀಜ್ನಲ್ಲಿ ಇರಲಿಲ್ಲ. 6 ರನ್ಗಳಿಸಿ ಮನಿಷ್ ಪಾಂಡೆ ಔಟಾದರು. ಕೆ.ಎಲ್ ರಾಹುಲ್ 24 ಬಾಲ್ಗಳಲ್ಲಿ 30ರನ್ಗಳಿಸಿ ಭರವಸೆ ಮೂಡಿಸಿದರು. ಹರ್ಷಲ್ ಪಟೇಲ್ ಬಲೆಗೆ ಸಿಲುಕಿ ಔಟಾದರು.