Homeಕ್ರೀಡೆP.Cricketಈ ಸಲ ಕಪ್ ನಮ್ದೆ ಎಂದು ಡಿಫರೆಂಟ್ ಆಗಿ ಹೇಳಿದ ಸಾಗರದ ಹೋಟೆಲ್ ಉದ್ಯಮಿ

ಈ ಸಲ ಕಪ್ ನಮ್ದೆ ಎಂದು ಡಿಫರೆಂಟ್ ಆಗಿ ಹೇಳಿದ ಸಾಗರದ ಹೋಟೆಲ್ ಉದ್ಯಮಿ

ಶಿವಮೊಗ್ಗ : ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಐಪಿಎಲ್ 14 ನೇ ಆವೃತ್ತಿಯ ಉದ್ಘಾಟನೆ ಪಂದ್ಯ ಇಂದು ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ.  ಕಳೆದ 13 ಆವೃತ್ತಿಯಿಂದಲೂ ಈ ಸಲ ಕಪ್ ನಮ್ದೆ ಎನ್ನುತ್ತಿರುವ ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ.  ಆದ್ರೆ, ಶಿವಮೊಗ್ಗದ ಆರ್.ಸಿ.ಬಿ. ಅಭಿಮಾನಿ ಒಬ್ರು ಡಿಪ್ರೆಂಟಾಗಿ ಈ ಸಲಾ ಕಪ್ ನಮ್ದೆ ಅಂತಿದ್ದಾರೆ.
ಶಿವಮೊಗ್ಗದ ಸಾಗರದ ನಿವಾಸಿಯಾಗಿರುವ ಸಂತೋಷ್, ಸಾಗರದ ಶಿವಮೊಗ್ಗದ ರಸ್ತೆಯಲ್ಲಿ ಸದ್ಗುರು ಎಂಬ ಹೆಸರಿನ ಹೊಟೆಲ್ ನಡೆಸುತ್ತಿದ್ದಾರೆ.  ಆದ್ರೆ, ಇವ್ರು ಹೊಟೆಲ್ ಗೆ ಬರುವ ಗ್ರಾಹಕರಿಗೆ, ಕಂಪ್ಯೂಟರಿಕೃತ ಬಿಲ್ ನೀಡುವ ವೇಳೆ, ಬಿಲ್ ಕೆಳ ಭಾಗದಲ್ಲಿ, ವಿಸಿಟ್ ಎಗೈನ್ ಮತ್ತು ಈ ಸಲಾ ಕಪ್ ನಮ್ದೆ ಎನ್ನುವ ಲೈನ್ ಸೇರಿಸಿ, ಡಿಫ್ರೆಂಟಾಗಿ ಗಮನ ಸೆಳೆಯುತ್ತಿದ್ದಾರೆ.  ಅಲ್ಲದೇ, ತಮ್ಮ ಡಿಫ್ರೆಂಟ್ ಶೇಡ್ ನ ಕರ್ನಾಟಕದ ಬಾವುಟದ ಕೆಂಪು ಹಳದಿ ಬಣ್ಣದ ಬಜಾಜ್ ಸ್ಕೂಟರ್ ಮೇಲೂ ಕೂಡ ಈ ಸಲಾ ಕಪ್ ನಮ್ದೆ ಅಂತಾ ಬೋರ್ಡ್ ಹಾಕಿ ಗಮನ ಸೆಳೆದಿದ್ದಾರೆ.  ಐಪಿಎಲ್ ಕ್ರಿಕೇಟ್ ಮೇಲೆ ಅಪಾರ ಆಸಕ್ತಿ ಹೊಂದಿರುವ ಸಂತೋಷ್ ಅವರು, ಇಂದು ಆರ್.ಸಿ.ಬಿ. ಮತ್ತು ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಹಣಾಹಣಿಗೆ ಈ ರೀತಿ ಸಾಕ್ಷಿಯಾಗಿದ್ದು, ಆರ್.ಸಿ.ಬಿ. ಗೆ ಈ ರೀತಿ ಪ್ರೋತ್ಸಾಹಿಸುತ್ತಿದ್ದಾರೆ.  ಅಲ್ಲದೇ, ತಮ್ಮ ಹೊಟೆಲ್ ಗೆ ಬರುವ ಗ್ರಾಹಕರಿಗೆ ಈ ಸಲಾ ಕಪ್ ನಮ್ದೆ ಎನ್ನುವ ಬಜಾಜ್ ಸ್ಕೂಟರ್ ಮೇಲೆ ಕುಳಿತು, ಫೋಟೋ ತೆಗೆಸಿಕೊಳ್ಳಲು ಕೂಡ ಅವಕಾಶ ಮಾಡಿಕೊಡ್ತಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments