Sunday, May 29, 2022
Powertv Logo
Homeದೇಶಸಾಲದ ಬಡ್ಡಿ ಮನ್ನಾ ಮಾಡಿದ್ರೆ 2 ಲಕ್ಷ ಕೋಟಿ ರೂ ನಷ್ಟವಾಗುತ್ತೆ ಎಂದ ಆರ್​ಬಿಐ

ಸಾಲದ ಬಡ್ಡಿ ಮನ್ನಾ ಮಾಡಿದ್ರೆ 2 ಲಕ್ಷ ಕೋಟಿ ರೂ ನಷ್ಟವಾಗುತ್ತೆ ಎಂದ ಆರ್​ಬಿಐ

ನವದೆಹಲಿ: ಲಾಕ್​ಡೌನ್ ಆದಾಗಿನಿಂದ ಸಾಲಗಾರರು ಕಟ್ಟಬೇಕಾಗಿದ್ದ ಕಂತುಗಳಿಗೆ 6 ತಿಂಗಳುಗಳ ಕಾಲ ವಿನಾಯಿತಿ ನೀಡಲಾಗಿತ್ತು. ಆದರೆ ಇದೀಗ ಸಾಲದ ಕಂತಿನ ಬಡ್ಡಿಯನ್ನು ಮನ್ನಾ ಮಾಡಲು ಸಲ್ಲಿಸುವ ಅರ್ಜಿಯನ್ನು ಪುರಸ್ಕರಿಸಬೇಡಿ ಎಂದು ಆರ್​ಬಿಐ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದೆ.

ಕಳೆದ ಮಾರ್ಚ್ 27 ಹಾಗೂ ಮೇ 22 ರಂದು ಎರಡು ಪ್ರಕಟಣೆ ಹೊರಡಿಸಿದ್ದ ಆರ್​ಬಿಐ, ಬ್ಯಾಂಕ್​ಗಳಿಗೆ ಸಾಲಗಾರರು ಕಟ್ಟುತ್ತಿದ್ದ ಇಎಂಐ ಅನ್ನು ಕಳೆದ ಮಾರ್ಚ್ 1 ರಿಂದ ಮುಂದಿನ ಆಗಸ್ಟ್ 31 ರವರೆಗೂ ಸಾಲದ ಕಂತುಗಳನ್ನು ಕಟ್ಟಲು ವಿನಾಯಿತಿಗಳನ್ನು ನೀಡಲಾಗಿತ್ತು. ಆದರೆ ಸುಪ್ರೀಂಕೋರ್ಟ್​ನಲ್ಲಿ ಈ ಆರು ತಿಂಗಳ ಬಡ್ಡಿಯನ್ನು ಮನ್ನಾ ಮಾಡಿ ಎಂದು ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಆದರೆ ಅದಕ್ಕೆ ಉತ್ತರಿಸಿದ ಆರ್​ಬಿಐ, ಸಾಲದ ಕಂತುಗಳನ್ನು ಮನ್ನಾ ಮಾಡಿದರೆ ದೇಶದ ಬ್ಯಾಂಕ್​ಗಳಿಗೆ 2 ಲಕ್ಷ ಕೋಟಿ ರೂ ನಷ್ಟವಾಗುತ್ತದೆ. ಇದರಿಂದ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಈ ಬಗ್ಗೆ ಸುಪ್ರೀಂಕೋರ್ಟ್ ಆರ್​ಬಿಐನಿಂದ ಸ್ಪಷ್ಟನೆ ಕೇಳಿದ್ದು, ಬ್ಯಾಂಕ್​ಗಳ ಠೇವಣಿದಾರರ ಸುರಕ್ಷತೆಯನ್ನು ಕಾಪಾಡಬೇಕು ಹಾಗೂ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಹಾಗೆಯೇ ಸಾಲ ಪಡೆದುಕೊಂಡವರೇ ಬಡ್ಡಿಯನ್ನು ಭರಿಸಬೇಕು ಅದನ್ನು ಮನ್ನಾ ಮಾಡಿ ಎಂದು ಬ್ಯಾಂಕ್​ಗಳ ಮೇಲೆ ಹೊರೆ ಹಾಕುವಂತಿಲ್ಲ ಎಂದು ಆರ್​ಬಿಐ ಸ್ಪಷ್ಟನೆ ನೀಡಿದೆ.

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments