Home ಕ್ರೀಡೆ P.Cricket ಮಾಸ್ಕ್​ ಹಾಕದ ಕ್ರಿಕೆಟಿಗನಿಗೆ ದಂಡ..!

ಮಾಸ್ಕ್​ ಹಾಕದ ಕ್ರಿಕೆಟಿಗನಿಗೆ ದಂಡ..!

 ರಾಜ್​ಕೋಟ್ : ಈಗಂತು ಎಲ್ಲೆಡೆ ಕರೋನಾದೇ ಸುದ್ದಿ. ಕರೋನಾದಿಂದ ರಕ್ಷಿಸಿಕೊಳ್ಳಬೇಕಾದರೆ ಮಾಸ್ಕ್ ಕಡ್ಡಾಯ ಅಂತ ಸರ್ಕಾವೂ ಹೇಳಿಬಿಟ್ಟಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ ಕೂಡ ವಿಧಿಸಲಾಗುತ್ತೆ. ಇದು ಕೇವಲ ಸಾಮಾನ್ಯ ಜನರಿಗೆ ಮಾತ್ರವಲ್ಲ, ವಿಐಪಿಗಳಿಗೂ ಅನ್ವಯಿಸುತ್ತೆ. ಇತ್ತೀಚಿಗೆ ಮಾಸ್ಕ್ ಧರಿಸದೇ ಓಡಾಡಿದ್ರು ಅಂತ ಭಾರತೀಯ ಕ್ರಿಕೆಟ್ ನ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೂ ದಂಡದ ಬಿಸಿ ತಟ್ಟಿತ್ತು. 

ಮೊನ್ನೆ, ತನ್ನ ಪತ್ನಿ ರಿವಾಬಾ ಜೊತೆ ಜಡೇಜಾ ಜಾಲಿ ರೈಡ್ ಅಂತ ಗುಜರಾತ್‌ನ ರಾಜ್ ಕೋಟ್‌ನಲ್ಲಿ ಸುತ್ತಾಡುತ್ತಿದ್ದಾಗ, ಪೊಲೀಸರು ತಡೆದಿದ್ದಾರೆ. ಫೇಸ್ ಮಾಸ್ಕ್ ಹಾಕದೇ ಓಡಾಡುತ್ತಿದ್ದರಿಂದ, ಮಹಿಳಾ ಠಾಣೆಯ ಕಾನ್ಸ್ಟೆಬಲ್ ನೀವು ಮಾಸ್ಕ್ ಯಾಕೆ ಧರಿಸಿಲ್ಲ ಅಂತ ಕೇಳಿದ್ದಾರೆ. ಜೊತೆಗೆ ನಿಮ್ಮ ಲೈಸೆನ್ಸ್ ತೋರಿಸಿ ಎಂದಿದ್ದಾರೆ. ಇದಕ್ಕೆ ಕುಪಿತರಾದ ಜಡೇಜಾ ನಾನು ಯಾರು ಅನೋದು ನಿನಗೆ ಗೊತ್ತಿಲ್ವಾ, ನನಗೇ ದಂಡ ವಿಧಿಸ್ತೀಯ ಅಂತ ಕಿರಿಕ್ ಮಾಡಿದ್ದಾರಂತೆ.


ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಓಡಾಡಿದ್ದು ತಪ್ಪಲ್ವಾ ಅಂತಾ ರಾಜ್ ಕೋಟ್ ಕಿಸನ್ ಪಾರಾ ಚೌಕ್‌ನ ಮಹಿಳಾ ಕಾನ್ಸ್ಟೆಬಲ್ ಸೋನಲ್ ಗೋಸಾಯ್ ಕೇಳಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಜಡೇಜಾ ಸೋನಲ್ ಅವರ ಜೊತೆ ವಾಗ್ವಾದಕ್ಕಿಳಿದರಂತೆ.

ನಂತರ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ ಜಡೇಜಾ, ಸೋನಲ್ ಅವರು ನನ್ನೊಂದಿಗೆ ರೂಡ್ ಆಗಿ ಬಿಹೇವ್ ಮಾಡ್ತಿದ್ದಾರೆ ಎಂದು ದೂರಿದ್ದಾರೆ. ಬಳಿಕ ಅಲ್ಲಿಗೆ ಬಂದ ಹಿರಿಯ ಅಧಿಕಾರಿಯೊಬ್ರು, ಸಮಾಧಾನ ಮಾಡಿ, ದಂಡ ಕಟ್ಟಿಸಿಕೊಳ್ಳದೆ ಕಳುಹಿಸಿ ಕೊಟ್ಟಿದ್ದಾರಂತೆ! 

ಈ ಎಲ್ಲಾ ಬೆಳವಣಿಗೆಗಳಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದು ಮಹಿಳಾ ಕಾನ್ಸ್ಟೆಬಲ್ ಸೋನಲ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರಂತೆ!

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments