ಹಿಂದೆಂದೂ ಕಾಣದ ಗೆಟಪ್​ನಲ್ಲಿ ಕ್ರೇಜಿಸ್ಟಾರ್ ‘ರವಿಬೋಪಣ್ಣ’..!

0
522

ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸುತ್ತಿರುವ ರವಿ ಬೋಪಣ್ಣ ಸಿನಿಮಾ ಸಖತ್ ಸುದ್ದಿಯಲ್ಲಿದೆ. ರವಿಚಂದ್ರನ್, ‘ಹೀಗೊಂದು ಸಿನಿಮಾ ಮಾಡ್ತಿದ್ದೀನಿ.. ಈ ಸಿನಿಮಾದಲ್ಲಿ ನನ್ನ ಹಿರಿಯ ಮಗ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸ್ತಿದ್ದಾನೆ. ಅವನ ಪಾತ್ರ ಇಡೀ ಸಿನಿಮಾಕ್ಕೆ ಟ್ವಿಸ್ಟ್​ ಕೊಡುವಂಥಾ ಪಾತ್ರ’ ಅಂತ ಹೇಳ್ತಿದ್ದಂತೆ ರವಿ ಬೋಪಣ್ಣ ಸಿನಿಮಾ ಬಗ್ಗೆ ಎಲ್ಲೆಡೆ ಟಾಕ್ ಶುರುವಾಗಿತ್ತು. ನೋಡು ನೋಡುತ್ತಿದ್ದಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾಗದ ಚಿತ್ರೀಕರಣದೊಂದಿಗೆ ಸಿನಿಮಾ ಶೂಟಿಂಗ್ ಆರಂಭವಾಯ್ತು. ಸುದೀಪ್ ಎರಡು ದಿನ ಶೂಟಿಂಗ್ ಮಾಡಿ ತಮ್ಮ ಜವಬ್ದಾರಿ ನಿಭಾಯಿಸಿ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನು ಗಣೇಶ ಹಬ್ಬದ ಪ್ರಯುಕ್ತ ‘ರವಿ ಬೋಪಣ್ಣ’ ಹೊಸ ಲುಕ್ ಬಿಡುಗಡೆ ಮಾಡಿದ್ದು, ರವಿಚಂದ್ರನ್ ಹಿಂದೆಂದೂ ಕಾಣದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದದ ಗಡ್ಡ ಬಿಟ್ಟಿರುವ ರವಿಚಂದ್ರನ್ ಮೀಸೆ ಮೇಲೆ ಕೈ ಇಟ್ಟುಕೊಂಡಿರುವ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

LEAVE A REPLY

Please enter your comment!
Please enter your name here