ಟೀಮ್ ಇಂಡಿಯಾ ಕೋಚ್ ಆಗಿ ರವಿ ಶಾಸ್ತ್ರಿ ಮುಂದುವರಿಕೆ

0
310

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿಯವರೇ ಮುಂದುವರೆಯಲಿದ್ದಾರೆ. ಶಾಸ್ತ್ರಿಯನ್ನು ಕೋಚ್ ಆಗಿ ಮುಂದುವರೆಸಲು ಸಿಎಸಿ ಅಸ್ತು ಅಂದಿದೆ.
2017ರಿಂದ ರವಿಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿ ಜವಬ್ದಾರಿ ನಿಭಾಯಿಸುತ್ತಿದ್ದಾರೆ. ಇಂದು ಕಪಿಲ್​ ದೇವ್ ನೇತೃತ್ವದ ಸಲಹಾ ಸಮಿತಿ ಶಾಸ್ತ್ರಿಯವರನ್ನೇ ಕೋಚ್ ಆಗಿ ಮುಂದುವರೆಸಲು ತೀರ್ಮಾನ ತೆಗೆದುಕೊಂಡಿದ್ದು, 2021ರ ಟಿ20 ವರ್ಲ್ಡ್​​​ಕಪ್​​ವರೆಗೆ ಶಾಸ್ತ್ರಿ ಕೋಚ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಇನ್ನು ಕೋಚ್​ ಹುದ್ದೆಗೆ ಬರೋಬ್ಬರಿ 2000ಕ್ಕೂ ಹೆಚ್ಚು ಅರ್ಜಿಗಳು ಬಿಸಿಸಿಐ ಕಚೇರಿಗೆ ಬಂದಿದ್ದವು. ಅದರಲ್ಲಿ ರವಿಶಾಸ್ತ್ರಿ ಅವರ ಅರ್ಜಿ ಸೇರಿದಂತೆ 6 ಮಂದಿ ಅರ್ಜಿಯನ್ನು ಅಂತಿಮಗೊಳಿಸಿ ಸಂದರ್ಶನಕ್ಕೆ ಕರೆಯಲಾಗಿತ್ತು. ಅಂತಿಮ ಹಂತದಲ್ಲಿ ಆಫ್ಘಾನಿಸ್ತಾನ ಮಾಜಿ ಕೋಚ್ ಫಿಲ್ ಸಿಮೋನ್ಸ್ ಸಂದರ್ಶನದಿಂದ ಹಿಂದೆ ಸರಿದಿದ್ದರು. ಇನ್ನು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಮೈಕ್ ಹೆಸನ್ ಹಾಗೂ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿ ಟಾಮ್ ಮೂಡಿ ಹಾಗೂ ರವಿಶಾಸ್ತ್ರಿ ಅವರೊಡನೆ ಸ್ಪರ್ಧೆ ಏರ್ಪಟ್ಟಿತ್ತು. ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತ ರಂಗಸ್ವಾಮಿ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಅಂತಿಮವಾಗಿ ಶಾಸ್ತ್ರಿಯವರನ್ನೇ ಕೋಚ್ ಹುದ್ದೆಯಲ್ಲಿ ಮುಂದುವರೆಸಲು ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here