Tuesday, September 27, 2022
Powertv Logo
Homeರಾಜ್ಯಭೂಗತ ಪಾತಕಿ ರವಿ ಪೂಜಾರಿಯ ಕಂಪ್ಲೀಟ್ ಪುರಾಣ..! ಈತ ಯಾರು? ಎಲ್ಲಿಯವನು?

ಭೂಗತ ಪಾತಕಿ ರವಿ ಪೂಜಾರಿಯ ಕಂಪ್ಲೀಟ್ ಪುರಾಣ..! ಈತ ಯಾರು? ಎಲ್ಲಿಯವನು?

ಸುಮಾರು 26 ವರ್ಷಗಳ ಕಾಲ ಭೂಗತ ಲೋಕವನ್ನು ಆಳಿ. ಪೊಲೀಸ್ ಬಲೆಗೆ ಬಿದ್ದಿರುವ ರವಿ ಪೂಜಾರಿಯನ್ನು ಇಂದು ಬೆಳಗ್ಗೆ ಬೆಂಗಳೂರಿಗೆ ಕರೆತರಲಾಗಿದೆ. ಆಫ್ರಿಕಾದ ಸೆನೆಗಲ್​​ನಲ್ಲಿ 2019ರ ಜನವರಿ 19ರಂದು ಬಂಧಿಸಲಾಗಿತ್ತು. ಒಂದು ವರ್ಷ ಈತನಿಗೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಏಫ್ರಾರ್ನ್ಸ್ ವಿಮಾನದ ಮೂಲಕ ಇಂದು ಬೆಂಗಳೂರಿಗೆ ಕರೆತರಲಾಗಿದೆ.

ರವಿ ಪೂಜಾರಿ ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ಕಲ್ಮಾಡಿ ಬಪ್ಪುತೋಟದಲ್ಲಿ ಹುಟ್ಟಿದವನು. ಚಿಕ್ಕವಯಸ್ಸಲ್ಲಿಯೇ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ತಂದೆ ಜೊತೆಗೆ ಮುಂಬೈಗೆ ಹೋಗಿ ಕೆಲ ಮಾಡಿಕೊಂಡಿದ್ದ. ನಿಧಾನಕ್ಕೆ ಭೂಗತಕ ಜಗತ್ತಿಗೆ ಕಾಲಿಟ್ಟ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಅನೇಕ ಭಾಷೆಗಳನ್ನು ಬಲ್ಲವನಾಗಿದ್ದಾನೆ.
ತಂದೆ ಸೂರ್ಯಪೂಜಾರಿ, ತಾಯಿ ಸುಶೀಲ ಪೂಜಾರಿ. ಈ ದಂಪತಿಗೆ ಇಬ್ಬರು ಹೆಣ್ಣು ಮತ್ತು ಮೂವರು ಗಂಡು ಮಕ್ಕಳು. ರವಿ ಎರಡನೇ ಮಗ. ಸೂರ್ಯಪೂಜಾರಿಗೆ ಮುಂಬೈನಲ್ಲಿ ಕೆಲಸ ಸಿಕ್ಕಿದ್ದರಿಂದ ಕುಟುಂಬ ಅಲ್ಲೇ ವಾಸವಿತ್ತು. ನಿವೃತ್ತಿ ನಂತ್ರ ಸೂರ್ಯ ಪೂಜಾರಿ ತನ್ನೂರಲ್ಲಿ ನೆಲೆಸಿದರು. 1990 -1992ರಲ್ಲಿ ಮಲ್ಪೆಯಲ್ಲಿ ನಡೆದ ಸಹೋದರಿಯ ಮದ್ವೆಗೆ ಬಂದಿದ್ದ
ಈತನ ಪತ್ನಿ ಹೆಸ್ರು ಪದ್ಮಾ ಪೂಜಾರಿ. ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಮಗನ ಮದ್ವೆ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಆಗ ಊರಿಗೆ ಭೇಟಿ ನೀಡಿದ್ದ ಆತ ಮತ್ತೆ ಕಾಣಿಸಿಕೊಂಡಿಲ್ಲ. ಮಲ್ಪೆ ವಡಭಾಂಡೇಶ್ವರ ನೆರ್ಗಿ ಸರಸ್ವತಿ ಭಜನಾ ಮಂದಿರ ಬಳಿ ರವಿ ಮನೆ ಇತ್ತು. ಕುಟುಂಬದವರು ಪೊಲೀಸರ ವಿಚಾರಣೆ ಕಿರಿಕಿರಿ ತಡೆಯಲಾಗದೆ ಮನೆ ಮಾರಿ ಊರೇ ಬಿಟ್ಟಿದ್ದಾರೆ ಎನ್ನಲಾಗಿದೆ. ತಂದೆ 6 ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಮಗಳೊಂದಿಗೆ ದೆಹಲಿಯಲ್ಲಿ ವಾಸವಿದ್ದಾರೆ. ತಾಯಿಯ ಸಹೋದರಿಯ ಸಂಬಂಧಿಗಳು ಮಾತ್ರ ಉಡುಪಿ ಆಸುಪಾಸಲ್ಲಿ ನೆಲೆಸಿದ್ದಾರೆ.

1990ರಲ್ಲಿ ಮುಂಬೈನಲ್ಲಿ ತನ್ನ ಭೂಗತ ಲೋಕದ ಚಟುವಟಿಕೆ ಆರಂಭಿಸಿದ ರವಿ, ಸಣ್ಣಪುಟ್ಟ ಕ್ರಿಮಿನಲ್ ಚಟುವಟಿಕೆಯಿಂದ ಹಂತ ಹಂತವಾಗಿ ಗ್ಯಾಂಗ್‌ಸ್ಟರ್ ಆದ. ತನ್ನದೇಯಾದ ಭೂಗತ ಸಾಮ್ರಾಜ್ಯ ಕಟ್ಟಿಕೊಂಡ. ಹಫ್ತಾ ವಸೂಲಿ ಈತನ ಮುಖ್ಯ ದಂಧೆಯಾಗಿತ್ತು. 90ರ ದಶಕದಲ್ಲಿ ಮುಂಬೈ, ಬೆಂಗಳೂರು, ಮಂಗಳೂರುಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ.
ಆಫ್ರಿಕಾ ದೇಶದ ಸೆನೆಗಲ್​​ನಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿ ಅಲ್ಲಿಯೇ ನೆಲೆ ನಿಲ್ಲಲು ಪ್ಲ್ಯಾನ್ ಮಾಡಿದ್ದ. ಪೊಲೀಸರಿಗೆ ಸುಳಿವು ಸಿಗಬಾರದೆಂದು ರ್ಬುನೋ ಫಾಸೋ ದೇಶದಿಂದ ಆಂಟನಿ ಫರ್ನಾಂಡಿಸ್ ಎಂಬ ಹೆಸರಿನಲ್ಲಿ ಪಾಸ್ಪೋರ್ಟ್ ಪಡೆದಿದ್ದ ಎಂದು ತಿಳಿದುಬಂದಿದೆ.
1992ರಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಬಳಿಕ ತಪ್ಪಿಸಿಕೊಂಡಿದ್ದ. 1995ರಲ್ಲಿ ಮುಂಬೈನ ಚೆಂಬೂರಲ್ಲಿ ಬಿಲ್ಡರ್ ಪ್ರಕಾಶ್ ಕುಕ್ರೇಜಾ ಎಂಬಾತನನ್ನು ಈ ಪೂಜಾರಿ ಗ್ಯಾಂಗ್ ಕೊಲೆ ಮಾಡಿತ್ತು. ದಾವೂದ್ ಇಬ್ರಾಹಿಂ ನಿಂದ ಛೋಟಾ ರಾಜನ್ ಸುಪಾರಿ ನೀಡಿದ್ದ ಹಿನ್ನೆಲೆಯಲ್ಲಿ ರವಿ ಪೂಜಾರಿ ಛೋಟಾ ರಾಜ್​​ನಿಂದ ದೂರ ಉಳಿದಿದ್ದ. ಗ್ಯಾಂಗ್ ಮಧ್ಯೆ ಜಗಳವಾಗಿ 2000ರಲ್ಲಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಭೂಗತ ಲೋಕದಲ್ಲಿ ಅಕ್ರಮವಾಗಿ ಕೋಟ್ಯಂತರ ರೂ. ಸಂಪಾದಿಸಿ ಮುಂಬಯಿಯಿಂದ ದುಬೈಗೆ ಹಾರಿದ್ದ. 2003ರಲ್ಲಿ ಬಿಲ್ಡರ್ ಸುರೇಶ್ ವಾಧ್ವಾ ಹತ್ಯೆಗೆ ಯತ್ನಿಸಿದ್ದ . 2005ರಲ್ಲಿ ವಕೀಲ ಮಜೀದ್ ಮೆಮೊನ್ ಹತ್ಯೆ ಮಾಡಿದ ಆರೋಪ ಕೂಡ ಈ ಪಾತಕಿ ಮೇಲಿದೆ.
2017 – 2018 ರಲ್ಲಿ ಭಾರತದ ಅನೇಕ ರಾಜಕಾರಣಿಗಳಿಗೆ, ಉದ್ಯಮಿಳಿಗೆ ಈತನಿಂದ ಬೆದರಿಕೆ ಕರೆಗಳು ಬಂದಿದ್ದವು. 2009 ರಿಂದ 2013ರವರೆಗೆ ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್, ಶಾರುಖ್ ಖಾನ್, ಕರಣ್ ಜೋಹರ್, ರಾಕೇಶ್ ರೋಶನ್ ಮೊದಲಾದ ಸಿನಿಮಾ ತಾರೆಯರಿಗೆ ಬೆದರಿಕೆಯೊಡ್ಡಿದ್ದ. 2019ರಲ್ಲಿ ಆಫ್ರಿಕಾದಲ್ಲಿ ಬಂಧನಕ್ಕೆ ಒಳಗಾಗಿದ್ದ. ಇದೀಗ ಭಾರತಕ್ಕೆ ಕರೆತರಲಾಗಿದೆ.

24 COMMENTS

 1. подписчики instagram бесплатно [url=https://krutiminst.ru/]раскрутка подписчиков в инстаграме[/url]
  [url=https://krutiminst.ru/]бесплатная накрутка лайков в инстаграмм[/url]
  [url=https://krutiminst.ru/]накрутка на инстаграм бесплатно[/url]
  [url=https://krutiminst.ru/]сайт раскрутка подписчиков[/url]
  [url=https://krutiminst.ru/]инста подписчики[/url]

  подписка инстаграм бесплатно
  https://krutiminst.ru/
  [url=https://teamdistancerunners.nl/posts/view/3/1192]просмотр видео в инстаграме накрутка[/url] dad1a66

LEAVE A REPLY

Please enter your comment!
Please enter your name here

- Advertisment -

Most Popular

Recent Comments