ರವಿಚಂದ್ರನ್​ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ರು ಕಿಚ್ಚ ..! ‘ರವಿ ಬೋಪಣ್ಣ’ ಸುದೀಪ್ ಪಾತ್ರ ರಿವೀಲ್..!

0
490

ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸ್ತಿರೋ ಸಿನಿಮಾ ರವಿ ಬೋಪಣ್ಣ. ಕಳೆದ ವಾರವಷ್ಟೇ ಈ ಸಿನಿಮಾ ಬಗ್ಗೆ ರವಿಚಂದ್ರನ್ ಮಾತನಾಡಿದ್ರು. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಸುದೀಪ್ ನಟಿಸ್ತಾರೆ, ಆ ಪಾತ್ರ ಇಡೀ ಸಿನಿಮಾಕ್ಕೆ ಟ್ವಿಸ್ಟ್ ಕೊಡುವಂಥಾ ಪಾತ್ರ. ಸುದೀಪ್ ಕೂಡ ಓಕೆ ಅಂದಿದ್ದಾರೆ ಅಂತ ರವಿಚಂದ್ರನ್ ಹೇಳಿದ್ದರು. ಇದೀಗ ರವಿ ಬೋಪಣ್ಣ ಚಿತ್ರೀಕರಣ ಕೂಡ ಶುರುವಾಗಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ತಮ್ಮ ಪಾಲಿನ ಕೆಲಸವನ್ನು ಮುಗಿಸಿದ್ದಾರೆ.
ನಿನ್ನೆ ಮತ್ತು ಇಂದು (ಶನಿವಾರ, ಭಾನುವಾರ) ಸುದೀಪ್​ ಪಾತ್ರದ ಶೂಟಿಂಗ್ ನಡೀತು. ಎರಡು ದಿನಗಳಲ್ಲಿ ಸುದೀಪ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮುಗಿಸಿಕೊಟ್ಟಿದ್ದಾರೆ.
ಇಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಲ್ಲಿ ಶೂಟಿಂಗ್ ನಡೀತು. ಶೂಟಿಂಗ್ ಬಳಿಕ ರವಿಚಂದ್ರನ್, ಸುದೀಪ್ ಪ್ರೆಸ್​ಮೀಟ್ ಕೂಡ ಮಾಡಿದ್ರು. ಸುದೀಪ್ ಪಾತ್ರ ಕ್ಲೈಮ್ಯಾಕ್ಸ್​ನದ್ದು. ಆದರೆ, ಚಿತ್ರೀಕರಣ ಶುರು ಮಾಡಿದ್ದು ಅವರಿಂದಲೇ. ನನ್ನ ಮೇಲಿನ ಪ್ರೀತಿಯಿಂದ ಬಂದು ಶೂಟಿಂಗ್ ಮಾಡಿಕೊಟ್ಟಿದ್ದಾನೆ ನನ್ನ ಹಿರಿಯ ಮಗ ಸುದೀಪ ಅಂತ ರವಿಚಂದ್ರನ್ ಚಿತ್ರ ಶುರುವಾದ ಬಗ್ಗೆ ಸಂತಸದ ನುಡಿಗಳನ್ನಾಡಿದ್ರು. ಜೊತೆಗೆ ಸುದೀಪ್ ನಟನೆಯ ಬಗ್ಗೆಯೂ ರವಿಮಾಮ ಬಣ್ಣಿಸಿದ್ರು.
ಇನ್ನು ಸುದೀಪ್ ಕೂಡ ಮಾತನಾಡಿ ರವಿಚಂದ್ರನ್ ಕರೀತಾರೆ ಅಂದ್ರೆ ಸಾಕು ಯಾವ ಪಾತ್ರವಾದ್ರೂ ಸರಿ ಬಂದು ಮಾಡ್ತೀನಿ. ಅವರು ನಮ್ಗೆ ಕರೆ ಮಾಡಿ ಬರ್ತೀರಾ ಅಂತ ಕೇಳೋದಕ್ಕಿಂತ ದೊಡ್ಡದೇನೂ ಇಲ್ಲ. ರವಿಚಂದ್ರನ್ ಅವರು ನನ್ನನ್ನು ಕರೆದಿದ್ದಕ್ಕೆ ತುಂಬಾ ಖುಷಿ ಇದೆ ಅಂತ ಹೇಳಿದ್ರು.
ಸುದೀಪ್ ಪಾತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸುದೀಪ್ ರವಿ ಬೋಪಣ್ಣ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್ ದೃಶ್ಯದಿಂದ ಸಿನಿಮಾ ಶೂಟಿಂಗ್ ಆರಂಭವಾಗಿದೆ. 

LEAVE A REPLY

Please enter your comment!
Please enter your name here