Tuesday, September 27, 2022
Powertv Logo
Homeರಾಜ್ಯಮಗನ ಅಗಲಿಕೆ ನೋವಲ್ಲೂ ಮತದಾನ ಮಾಡಿದ ತಾಯಿ!

ಮಗನ ಅಗಲಿಕೆ ನೋವಲ್ಲೂ ಮತದಾನ ಮಾಡಿದ ತಾಯಿ!

ಹಾವೇರಿ : ಮಗನ ಅಗಲಿಕೆ ನೋವಲ್ಲೂ ಮತದಾನ ಮಾಡಿ ತಾಯಿಯೊಬ್ಬರು ಆದರ್ಶ ಮೆರೆದಿದ್ದಾರೆ. ಮತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ನಿರ್ಲಕ್ಷ್ಯ ತೋರುವ ಜನರ ನಡುವೆ ಇಂತಹವರು ಮಾದರಿಯಾಗುತ್ತಾರೆ. ಮನಸ್ಸಲ್ಲಿ ದುಃಖ ತುಂಬಿದ್ದರೂ, ಹೃದಯ ಭಾರವಾಗಿದ್ದರೂ ತನ್ನ ಹಕ್ಕನ್ನು ಚಲಾಯಿಸಿರುವ ತಾಯಿ ನಿಜಕ್ಕೂ ಗ್ರೇಟ್.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತೋಟಗಂಟಿ ಗ್ರಾಮದ ರತ್ನಮ್ಮ ದುಃಖದ ಮಡುವಿನಲ್ಲೂ ಮತದಾನ ಮಾಡಿದ ಮಹಾತಾಯಿ. ಈಕೆಯ ಮಗ ಲೋಹಿತ್ ಹಾಲೇಶ್ (21) ಶಂಕಿತ ಡೆಂಘೆಯಿಂದ ನಿನ್ನೆಯಷ್ಟೇ ಮೃತಪಟ್ಟಿದ್ದಾರೆ. ಮಗನ ಅಗಲಿಕೆಯ ನೋವಲ್ಲೂ ರತ್ನಮ್ಮ , ಮೃತ ಲೋಹಿತ್ ತಂಗಿ ಮೀನಾಕ್ಷಿ ಮತ್ತು ಕುಟುಂಬಸ್ಥರು ಮತದಾನ ಮಾಡಿದ್ದಾರೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡುವ ಮೂಲಕ ಇಡೀ ಕುಟುಂಬ ಮತದಾನದ ಜಾಗೃತಿ ಮೂಡಿಸಿದೆ.

19 COMMENTS

  1. valacyclovir pill [url=https://valtrexus.com/#]order valtrex 1000mg pill [/url] can you take valacyclovir everyday how much valacyclovir should i take

LEAVE A REPLY

Please enter your comment!
Please enter your name here

- Advertisment -

Most Popular

Recent Comments