ರಥಸಪ್ತಮಿ ಸಂಭ್ರಮ: ಸಾಮೂಹಿಕ ಸೂರ್ಯ ನಮಸ್ಕಾರ

0
236

ಶಿವಮೊಗ್ಗ: ರಥಸಪ್ತಮಿ ಹಿನ್ನೆಲೆ ಶಿವಮೊಗ್ಗದಲ್ಲಿ ಇಂದು ಪತಂಜಲಿ ಯೋಗ ಸಮಿತಿ ವತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಗಾಂಧಿ ಉದ್ಯಾನವನದ ಆವರಣದಲ್ಲಿ, ಸೂರ್ಯ ನಮಸ್ಕಾರ-ಯೋಗ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷ ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ, 7 ನೇ ದಿನದಂದು ಸೂರ್ಯಾರಾಧನೆಗೆ ವಿಶೇಷ ಪರ್ವ ದಿನವಾಗಿದೆ. ಇಂದಿನಿಂದ ಹಗಲು-ರಾತ್ರಿ ಸಮ ಪ್ರಮಾಣದಲ್ಲಿರುತ್ತದೆ. ಈ ರಥಸಪ್ತಮಿ ಋತುಮಾನದ ಹಬ್ಬವಾಗಿದ್ದು, ಇಂದಿನಿಂದ ಸೂರ್ಯನ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ.

ಇನ್ನೊಂದಡೆ ಬೆಂಗಳೂರಿನಲ್ಲಿ ರಥಸಪ್ತಮಿ ಹಿನ್ನೆಲೆಯಲ್ಲಿ ಮುತ್ತಿನ ಪಲ್ಲಕ್ಕಿ ಹಾಗೂ 37 ದೇವರ ಮರೆವಣಿಗೆ ಸಾಗಲಿದ್ದು, ಇತರೆ ಸಾಂಸ್ಕೃತಿ ಕಾರ್ಯಕ್ರಮಗಳೂ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಏಳು ಗಂಟೆಯಿಂದ ನಾಳೆ ಬೆಳಗ್ಗೆ 9 ಗಂಟೆವರೆಗೆ ಆಡುಗೋಡಿ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮಡಿವಾಳ ಮತ್ತು ಹೊಸೂರು ರಸ್ತೆ ಸಂಚರಿಸುವ ವಾಹನಗಳು ಡಾ.ಮರಿಗೌಡ ರಸ್ತೆ ಮಾರ್ಗವಾಗಿ ಬೆಂಗಳೂರು ಡೈರಿ ರಸ್ತೆ ಮೂಲಕ ನೇರವಾಗಿ ಕೆ.ಎಚ್.ರಸ್ತೆ ಕಡೆಗೆ ಅಥವಾ ಬಲ ತಿರುವು ಪಡೆದುಕೊಂಡು ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.

LEAVE A REPLY

Please enter your comment!
Please enter your name here