Monday, January 17, 2022
Powertv Logo
Homeದೇಶದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ರ‍್ಯಾಪರ್ ಯಂಗ್ ಡಾಲ್ಫ್ ಸಾವು

ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ರ‍್ಯಾಪರ್ ಯಂಗ್ ಡಾಲ್ಫ್ ಸಾವು

ವಾಷಿಂಗ್ಟನ್‌ : ಅಮೇರಿಕಾದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದೆ. ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಖ್ಯಾತ ರಾಪರ್ 36 ವರ್ಷದ ಯಂಗ್ ಡಾಲ್ಫ್ ಮೃತಪಟ್ಟಿದ್ದಾರೆ. ಅಮೆರಿಕಾದ ಟೆನ್ನೆಸ್ಸಿಯ ಮೆಂಫಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

2017 ರ ಫೆಬ್ರವರಿ ತಿಂಗಳಲ್ಲಿನೇ ಲಾಸ್ ಏಂಜಲೀಸ್‌ನಲ್ಲಿ 2 ಬಾರಿ ರ‍್ಯಾಪರ್ ಯಂಗ್ ಡಾಲ್ಫ್ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅದೃಷ್ಟವಶಾತ್ ಅವರು ಬದುಕುಳಿದಿದ್ದರು. ಆದರೆ ಈಗ ಮತ್ತೆ ಗುಂಡಿನ ದಾಳಿ ಮಾಡಲಾಗಿದ್ದು, ಸಾವನ್ನಪ್ಪಿದ್ದಾರೆ. 2008ರಿಂದ ರಾಪರ್‌ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿರುವ ಯಂಗ್ ಡಾಲ್ಫ್, ಇವರ ಕಿಂಗ್ ಆಫ್ ಮೆಂಫಿಸ್, ರಿಚ್ ಸ್ಲೇವ್, ಪೇಪರ್ ರೂಟ್ ಕ್ಯಾಂಪೇನ್ ಇನ್ನೂ ಅನೇಕ ಅಲ್ಬಂ ಹಾಡುಗಳು ಜನಪ್ರಿಯವಾಗಿವೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments