Home ಸಿನಿ ಪವರ್ ಧೋನಿ ಕಾರಣಕ್ಕಾಗಿಯೇ ಜಾಹೀರಾತಲ್ಲಿ ಕೆಲಸಕ್ಕೆ ಸೇರಿಕೊಂಡಿದ್ರಂತೆ ರಣವೀರ್ ಸಿಂಗ್..!

ಧೋನಿ ಕಾರಣಕ್ಕಾಗಿಯೇ ಜಾಹೀರಾತಲ್ಲಿ ಕೆಲಸಕ್ಕೆ ಸೇರಿಕೊಂಡಿದ್ರಂತೆ ರಣವೀರ್ ಸಿಂಗ್..!

ಟೀಮ್ ಇಂಡಿಯಾ ಮಾಜಿ  ಕ್ಯಾಪ್ಟನ್, ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಕಾರಣಕ್ಕಾಗಿಯೇ ಬಾಲಿವುಡ್​ ನಟ ರಣವೀರ್ ಸಿಂಗ್ ಜಾಹೀರಾತುವಿನಲ್ಲಿ ಕೆಲಸಕ್ಕೆ ಸೇರಿದ್ರಂತೆ! ಧೋನಿಯನ್ನು ಭೇಟಿ ಆಗ್ಬಹುದು, ಅವರ ಜೊತೆ ಕಾಲ ಕಳೆಯಬಹುದು ಎಂಬ ಒಂದೇ ಒಂದು ಕಾರಣಕ್ಕೆ ಅಂದು ಜಾಹೀರಾತುವೊಂದಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹೋಗಿದ್ರಂತೆ…! ಸ್ವತಃ ರಣವೀರ್​ ಸಿಂಗ್ ಅವರೇ ಈ ವಿಷಯವನ್ನು  ಪತ್ರ ಮುಖೇನ ಹೇಳಿಕೊಂಡಿದ್ದಾರೆ.

ಹೌದು,  ಧೋನಿ ಇಂಟರ್ನ್ಯಾಷನಲ್ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಆ ದಿನಗಳು, ಧೋನಿ ಬಗೆಗಿನ ಅಭಿಮಾನದ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಧೋನಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ರಣವೀರ್ ಸಿಂಗ್, “ ಈ ಫೋಟೋ ನನ್ನ ಅಮೂಲ್ಯ ಆಸ್ತಿ. 2007 -08ರಲ್ಲಿ ಕಾರ್ಜತ್​ನ ಎನ್​ಡಿ ಸ್ಟುಡಿಯೋದಲ್ಲಿ ತೆಗೆಸಿದ್ದ ಫೋಟೋವಿದು. ನಂಗೆ ಆಗ 22 ವರ್ಷ. ಧೋನಿ ಜಾಹೀರಾತಲ್ಲಿ ನಟಿಸ್ತಾರೆ ಎಂಬ ಒಂದೇ ಒಂದು ಕಾರಣಕ್ಕಾಗಿ ಅಸಿಸ್ಟೆಂಟ್​ ಡೈರೆಕ್ಟರ್​ ಆಗಿ ಕೆಲಸ ಮಾಡಲು ಒಪ್ಕೊಂಡಿದ್ದೆ. ಆ ವೇಳೆ ಬಗಳ ಕಮ್ಮಿ ವೇತನಕ್ಕೆ ಕೆಲಸ ಮಾಡ್ತಿದ್ದೆ.  ವೇತನದ ಬಗ್ಗೆ ತಲೆಕೆಡಿಸಿಕೊಂಡಿರ್ಲಿಲ್ಲ. ಧೋನಿ ಜೊತೆ ಇರಲು ಬಯಸಿದ್ದೆ ಅಷ್ಟೇ.. ಆ ಟೈಮ್​ನಲ್ಲಿ ಗಾಯಗೊಂಡಿದ್ದೆ. ಆದ್ರೂ ಕೂಡ ಧೋನಿಯನ್ನು ಭೇಟಿಯಾಗೋ, ಫೋಟೋ ತೆಗೆಸಿಕೊಳ್ಳೋ ಅವಕಾಶ ಸಿಗುತ್ತೆ ಅಂತ ಹೋಗಿದ್ದೆ. ನೋವಿನಲ್ಲೂ ಪ್ರಾಮಾಣಿಕ ಕೆಲಸ ಮಾಡಿದ್ದೆ. ಧೋನಿ ಬಹಳ ವಿನಮ್ರವಾಗಿದ್ದರು, ತಾಳ್ಮೆಯಿಂದಿದ್ರು. ಅವರೊಬ್ಬ ದಯೆ, ಕರುಣೆಯುಳ್ಳ ವ್ಯಕ್ತಿ ಅಂತ ತಿಳಿಯಿತು. ಆಮೇಲೆ ಅವರ ಮೇಲಿನ ಗೌರವ, ಪ್ರೀತಿ ಮತ್ತಷ್ಟು ಹೆಚ್ಚಿತು. ಅವರು ನನ್ನ ಟೋಪಿ ಹಾಗೂ ಜರ್ಸಿಗೆ ಸಹಿ ಮಾಡಿದ್ದರು. ಆ ವೇಳೆ ಎಲ್ಲಾ ಅಭಿಮಾನಿಗಳಂತೆ ನಂಗೂ ಮೋಡಗಳ ಮೇಲೆ ನಡೆಯುತ್ತಿದ್ದೇನೆ ಅಂತ ಅನ್ಸಿತ್ತು. ಅವತ್ತಿಂದ ನಾನು ಅವರನ್ನು ಭೇಟಿಯಾಗುವಂಥಾ ಪ್ರತಿ ಅವಕಾಶದಲ್ಲೂ ಕೂಡ  ಉತ್ಸಾಹಭರಿತನಾಗಿರ್ತೀನಿ. ಅವರು ನಂಗೆ ಹಿರಿಯ ಸಹೋದರನಂತೆ’’ ಅಂತ ಪ್ರೀತಿಯ ನುಡಿಗಳನ್ನು ಬರೆದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments