‘ರಂಗನಾಯಕ’ನಿಗಾಗಿ ಒಂದಾದ ಜಗ್ಗೇಶ್-ಗುರುಪ್ರಸಾದ್..!

0
282

ನವರಸ ನಾಯಕ ಜಗ್ಗೇಶ್ ಮತ್ತು ಡೈರೆಕ್ಟರ್ ಗುರುಪ್ರಸಾದ್ ‘ರಂಗನಾಯಕ’ ಕಥೆ ಹೇಳೋಕೆ ಒಂದಾಗಿದ್ದಾರೆ..! 2006ರಲ್ಲಿ ‘ಮಠ’ , 2009ಲ್ಲಿ ‘ಎದ್ದೇಳು ಮಂಜುನಾಥ’ ಸಿನಿಮಾ ಮೂಲಕ ಸಿನಿಪ್ರಿಯರಿಗೆ ಕಾಮಿಡಿ ಟಾನಿಕ್ ನೀಡಿ ನಗೆ ಕಡಲಲ್ಲಿ ತೇಲಿಸಿದ್ದ ಈ ಜೋಡಿ ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಸಿನಿಮಾ ಮಾಡ್ತಿದ್ದಾರೆ.
ಡೈರೆಕ್ಟರ್ ಗುರುಪ್ರಸಾದ್ ಮತ್ತು ನಟ ಜಗ್ಗೇಶ್ ಕಾಂಬಿನೇಷನ್​ನ ಹೊಸ ಚಿತ್ರದ ಹೆಸರು ಕೂಡ ಅನೌನ್ಸ್ ಆಗಿದೆ. ‘ರಂಗನಾಯಕ’ ಅನ್ನೋ ಕ್ಯಾಚಿ ಟೈಟಲ್​​ ಸಿನಿಮಾಕ್ಕೆ ಫಿಕ್ಸ್ ಆಗಿದ್ದು, ಮೂರನೇ ಬಾರಿ ಜಗ್ಗೇಶ್, ಗುರು ಪ್ರಸಾದ್ ಕಾಂಬಿನೇಷನಲ್ ಮೋಡಿ ಮಾಡಲು ರೆಡಿಯಾಗಿದೆ. ಇನ್ನು ಈ ಚಿತ್ರಕ್ಕೆ ಎ.ಆರ್ ವಿಖ್ಯಾತ ಬಂಡವಾಳ ಹಾಕುತ್ತಿದ್ದು, ವಿಜಯ ದಶಮಿಗೆ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here