Tuesday, January 18, 2022
Powertv Logo
Homeವಿದೇಶ90ರ ದಶಕದ ಕೊನೆಯ ವಿಕೆಟ್​ ಪತನ - ಹೆರಾತ್​ಗೆ ಸೋಲಿನ ವಿದಾಯ

90ರ ದಶಕದ ಕೊನೆಯ ವಿಕೆಟ್​ ಪತನ – ಹೆರಾತ್​ಗೆ ಸೋಲಿನ ವಿದಾಯ

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಮ್ಯಾಚ್ ಮುಕ್ತಾಯದೊಂದಿಗೆ, ಹಿರಿಯ ಕ್ರಿಕೆಟಿಗ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಕೂಡ ತಮ್ಮ ಇಂಟರ್​ನ್ಯಾಷನಲ್ ಕ್ರಿಕೆಟ್​ ಜರ್ನಿಯನ್ನು ಕೊನೆಗೊಳಿಸಿದ್ದಾರೆ. ಇದ್ರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ 90ರ ದಶಕದಲ್ಲಿ ಪದಾರ್ಪಣೆ ಮಾಡಿದ್ದ ಕ್ರಿಕೆಟರ್ ಗಳೆಲ್ಲರೂ ಆಟ ಮುಗಿಸಿದಂತಾಗಿದೆ.
ಮ್ಯಾಚ್ ನ ಬಳಿಕ ನಿವೃತ್ತಿ ಹೊಂದುವುದಾಗಿ ಹೆರಾತ್​ ಮೊದಲೇ ಘೋಷಿಸಿದ್ರು. ಆದ್ರೆ, ಸಿಂಹಳಿಯರಿಗೆ ತಮ್ಮ ನೆಚ್ಚಿನ ರಂಗನಾಗೆ ಜಯದ ಉಡುಗೊರೆ ನೀಡಲಾಗಲಿಲ್ಲ. ತಮ್ಮ ವೃತ್ತಿ ಜೀವನದ ಕೊನೆಯ ಇನ್ನಿಂಗ್ಸ್​​ನಲ್ಲಿ ರನೌಟ್​​ ಆದ ಬೇಸರ ಹಾಗೂ ಪಂದ್ಯದ ಸೋಲಿನ ನಿರಾಸೆಯೊಂದಿಗೆ ಹೆರಾತ್​ ಪೆವಿಲಿಯನ್​ಗೆ ಭಾರದ ಹೆಜ್ಜೆಗಳನ್ನಿಟ್ರು.


1999ರಲ್ಲಿ, ಇಂಟರ್​ನ್ಯಾಷನಲ್​ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದ ರಂಗನಾ ಹೆರಾತ್ 19 ವರ್ಷಗಳ ಸುದೀರ್ಘ ಕರಿಯರ್​ಗೆ ಪೂರ್ಣವಿರಾಮ ಹಾಕಿದ್ರು. ವಿಶೇಷವೆಂದರೆ 19 ವರ್ಷಗಳ ಹಿಂದೆ ಗಾಲ್ಲೆ ಮೈದಾನದಲ್ಲಿಯೇ ಹೆರಾತ್ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ಮೂಲಕ ಟೆಸ್ಟ್​ ಕ್ರಿಕೆಟ್ ಗೆ ಎಂಟ್ರಿಕೊಟ್ಟಿದ್ದರು.
ರಂಗನಾ ಹೆರಾತ್​​ ಕ್ರಿಕೆಟ್​ ಕರಿಯರ್
            ಟೆಸ್ಟ್​        ಒಡಿಐ         ಟಿ-20
ಪಂದ್ಯ      93          71             17
ವಿಕೆಟ್​      433        74              18
ಬೆಸ್ಟ್​       14/184   4/20             5/3
ಪಾಕಿಸ್ತಾನದ ವಿರುದ್ಧ ಕೊಲಂಬೋದಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ 184 ರನ್​ ನೀಡಿ 14 ವಿಕೆಟ್​ ಕಬಳಿಸಿದ್ದು ಇವರ ವೃತ್ತಿ ಬದುಕಿನ ಶ್ರೇಷ್ಠ ಸಾಧನೆಯಾಗಿದೆ. ಪಂದ್ಯದ ಫಸ್ಟ್ ಇನ್ನಿಂಗ್ಸ್​ನಲ್ಲಿ 9 ಹಾಗೂ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಹೆರಾತ್ 5 ವಿಕೆಟ್​ ಕಬಳಿಸಿದ್ರು..
ಲಂಕಾ ಪರ ಅತಿ ಹೆಚ್ಚು ವಿಕೆಟ್​ ಪಟ್ಟಿಯಲ್ಲಿ ಲೆಜೆಂಡ್​ ಮುತ್ತಯ್ಯ ಮುರಳೀಧರನ್​ ಮೊದಲ ಸ್ಥಾನದಲ್ಲಿದ್ರೆ, ಹೆರಾತ್​ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಷ್ಟಲ್ಲದೇ ಹಲವು ದಾಖಲೆಗಳಿಗೆ ಹೆಸರಾಗಿದ್ದ ಹೆರಾತ್ ವೃತ್ತಿ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಅನ್ನೋದೆ ಅಭಿಮಾನಿಗಳ ಆಶಯ..
-ವಸಂತ್​ ಮಳವತ್ತಿ. ಸ್ಪೋರ್ಟ್ಸ್​​​ ಬ್ಯೂರೋ, ಪವರ್​ ಟಿವಿ

LEAVE A REPLY

Please enter your comment!
Please enter your name here

- Advertisment -

Most Popular

Recent Comments