Saturday, October 1, 2022
Powertv Logo
Homeಸಿನಿಮಾರಾನಾ - ಮಿಹೀಕಾ  ಮದುವೆಗೆ ಕ್ಷಣಗಣನೆ : ಅರಶಿನ ಶಾಸ್ತ್ರದಲ್ಲಿ ಕಂಗೊಳಿಸಿದ ನವಜೋಡಿ

ರಾನಾ – ಮಿಹೀಕಾ  ಮದುವೆಗೆ ಕ್ಷಣಗಣನೆ : ಅರಶಿನ ಶಾಸ್ತ್ರದಲ್ಲಿ ಕಂಗೊಳಿಸಿದ ನವಜೋಡಿ

ಹೆಂಗೆಳೆಯರ ಹಾಟ್ ಫೇವರಿಟ್ , ಹ್ಯಾಂಡ್ಸಮ್ ಹಂಕ್ , ಬಾಹುಬಲಿ ಖ್ಯಾತಿಯ ರಾನಾ ದಗ್ಗುಬಾಟಿ ಮದುವೆ ನಿಶ್ಚಯ ಆಗಿರೋದು ಎಲ್ಲರಿಗು ಗೊತ್ತೇ ಇದೆ . ಆಗಸ್ಟ್​ 8 ರಂದು ನಡೆಯುವ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಮಿಹೀಕ ಬಾಲಾಜಿ ಮತ್ತು ರಾನಾ ದಗ್ಗುಬಾಟಿ ಮದುವೆಯ ಅರಶಿನ ಶಾಸ್ತ್ರದಲ್ಲಿ ನವಜೋಡಿ ಕಂಗೊಳಿಸಿದೆ.  

ಪ್ರಸ್ತುತ ಕೊರೋನಾ ಭೀತಿ ಎಲ್ಲೆಡೆ ಆವರಿಸಿರುವುದರಿಂದ ರಾಣಾ-ಮಿಹೀಕಾ ಮದುವೆ ಹೇಗೆ ನಡೆಯಲಿದೆ ಎಂಬ ಕುತೂಹಲ ಅನೇಕರಲ್ಲಿದೆ.  ರಾನಾ  ಮದುವೆ ಅದ್ದೂರಿಯಾಗಿಯೇ ನಡೆಯಬೇಕಿತ್ತು. ಆದರೆ, ಕೊರೊನಾ ವೈರಸ್‌ ಎಲ್ಲದಕ್ಕೂ ಅಡ್ಡಗಾಲು ಹಾಕಿದೆ. ಹಾಗಾಗಿ, ರಾನಾ ಮದುವೆ ತುಂಬ ಸರಳವಾಗಿ ನಡೆಯುತ್ತಿದೆ. ಅದಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆಯಂತೆ.

ರಾನಾ  ಮತ್ತು ಮಿಹೀಕಾ ಮದುವೆಯನ್ನು ಸರಳವಾಗಿ  ಮಾಡಲು ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಹೈದರಾಬಾದ್‌ನ ಒಂದು ಹೋಟೆಲ್‌ ಅನ್ನು ಬುಕ್ ಮಾಡಲಾಗಿದೆ. ‘ಈ ಮದುವೆಗೆ 30 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ . ಮದುವೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕು ಮತ್ತು ಸೋಶಿಯಲ್​ ಡಿಸ್ಟೆನ್ಸ್​ ಪಾಲಿಸಲೇ ಬೇಕು ಅನ್ನೊ ಕಂಡಿಷನ್ಸ್​ ಹಾಕಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆಯಲಿದ್ದು,  ‘ಮದುವೆಗೆ ಹಾಜರಾಗುವ ಎಲ್ಲರಿಗೂ ಮೊದಲೇ ಕೊರೊನಾ ಪರೀಕ್ಷೆ ಮಾಡಿಸಲಾಗುವುದು. ಮದುವೆ ನಡೆಯುವ ಸ್ಥಳವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ.  ಮದುವೆಯ ಎಲ್ಲ ಕಾರ್ಯಕ್ರಮಗಳು ತೆಲುಗು ಮತ್ತು ಮಾರವಾಡಿ ಸಂಪ್ರದಾಯದಂತೆ ನಡೆಯಲಿದೆ.

ಒಟ್ನಲ್ಲಿ ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ರಾಜಕೀಯ ಗಣ್ಯರು , ಸಿನಿ ತಾರೆಯರು , ಸಂಬಂಧಿಕರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಸರಳವಾಗಿ ನಡೀತಾ ಇದೆ . ನವ ಜೋಡಿಗಳಿಗೆ ಸಿನಿಮಾ ತಾರೆಯರು , ಹಾಗು ಗಣ್ಯರು  ಆನ್ಲೈನ್ ಮತ್ತು ಫೋನ್ ಮೂಲಕ ವಿಶ್ ಮಾಡಿದ್ದಾರೆ .

-ಶಿಲ್ಪಾ ರಾಜನ್

8 COMMENTS

  1. I’m still learning from you, as I’m trying to achieve my goals. I certainly love reading everything that is written on your blog.Keep the posts coming. I loved it!

LEAVE A REPLY

Please enter your comment!
Please enter your name here

- Advertisment -

Most Popular

Recent Comments