ಕನ್ನಡಿಗರಿಗೆ ಅವಮಾನ ಮಾಡಿದ ಮಾಜಿ ಸಂಸದೆ ರಮ್ಯಾ..!

0
255

ಬೆಂಗಳೂರು : ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಕನ್ನಡಿಗರನ್ನು ಅವಮಾನಿಸಿದ್ದಾರೆ. ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿ ರಮ್ಯಾ ತೆಲುಗಿನಲ್ಲಿ ಟ್ವೀಟ್ ಮಾಡಿದ್ದಾರೆ. ಕನ್ನಡದ ಒಂದೇ ಒಂದು ಪದ ಕೂಡ ಅವರ ಟ್ವೀಟ್​ನಲ್ಲಿಲ್ಲ. ತೆಲುಗಿನಲ್ಲಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ.
ಕನ್ನಡತಿಯಾಗಿ, ಕನ್ನಡಿಗರಿಂದ ಹಿಂದೆ ಸಂಸತ್ತಿಗೆ ಹೋಗಿದ್ದ ರಮ್ಯಾಗೆ ಇವತ್ತು ಕನ್ನಡ ಬೇಕಿಲ್ವಾ..? ರಮ್ಯಾ ನಟಿಯಾಗಿ, ರಾಜಕಾರಣಿಯಾಗಿ ಯಶಸ್ಸು ಕಂಡಿದ್ದು ಕನ್ನಡದಲ್ಲಿ, ಕನ್ನಡಿಗರಿಂದ, ಕನ್ನಡದ ನೆಲೆಯಲ್ಲಿ..! ಹೀಗಿದ್ದರೂ ಇಂದು ಕನ್ನಡ ರಮ್ಯಾ ಅವರಿಗೆ ಬೇಡವಾಗಿದೆ. ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತೆಲುಗಿನಲ್ಲಿ ಹಾಕುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

LEAVE A REPLY

Please enter your comment!
Please enter your name here