ರಮ್ಯಾ…. ಸಿನಿರಂಗದಿಂದ ದೂರವಿದ್ರೂ ಇವತ್ತಿಗೂ ಅಭಿಮಾನಿಗಳ ಪಾಲಿಗೆ ಸ್ಯಾಂಡಲ್ವುಡ್ ಕ್ವಿನೇ… ರಾಜಕೀಯಕ್ಕೆ ಎಂಟ್ರಿಕೊಟ್ಟ ಮೇಲೆ ಚಿತ್ರರಂಗದಿಂದ ಬಹಳಷ್ಟು ದೂರವಿದ್ದಾರೆ… ಅವರು ಅಂತರ ಕಾಯ್ದುಕೊಂಡಿದ್ರೂ ಇವತ್ತಿಗೂ ಕೂಡ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ ಅನ್ನೋದ್ರಲ್ಲಿ ನೋ ಡೌಟ್…
ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವಿನ ನಗೆಬೀರಿ ಸಂಸತ್ ಪ್ರವೇಶಿಸಿದ್ದ ರಮ್ಯಾ 2014ರ ಲೋಕಸಭಾ ಚುನಾವಣೆಯಲ್ಲಿ ಸೋತ್ಮೇಲೂ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡ್ರು..! ಕಾಂಗ್ರೆಸ್ನಲ್ಲಿ ಉನ್ನತ ಸ್ಥಾನಪಡೆದಿದ್ರು. ಒಂದಿಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ರು… ಆಮೇಲೆ ನಿಧಾನಕ್ಕೆ ಅದ್ಯಾಕೋ ಸೈಲಂಟಾಗಿದ್ರು.. ಇದೀಗ ಎರಡು ವರ್ಷದ ನಂತ್ರ ರಮ್ಯಾ ಮತ್ತೆ ಬಂದಿದ್ದಾರೆ..! ಒಂದಿಷ್ಟು ವಿಭಿನ್ನ ಸೆಲ್ಫಿ ಫೋಟೋಗಳ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದು, ರಮ್ಯಾ ಸಿನಿರಂಗಕ್ಕೆ ಕಮ್ಬ್ಯಾಕ್ ಆಗ್ತಾರಾ ಅನ್ನೋ ಚರ್ಚೆ ಶುರುವಾಗಿದೆ!
ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿರೋ ರಮ್ಯಾ, ‘’ ನಾನು ನನ್ನ ಕೊನೆಯ ಪೋಸ್ಟ್ ಹಾಕಿ ಒಂದಿಷ್ಟು ಸಮಯ ಕಳೆದಿದೆ. ಮರಗಳು, ಹಕ್ಕಿಗಳು, ಪುಸ್ತಕಗಳು ಹಾಗೂ ನನ್ನ ನಾಯಿಗಳ ಫೋಟೋಗಳ ಮೂಲಕ ನಿಧಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳೋಕೆ ಶುರುಮಾಡಿದ್ದೆ. ನಿಮ್ಮನ್ನು ನೋಡಿ ಬಹಳ ದಿನಗಳಾಗಿವೆ. ಒಂದು ಸೆಲ್ಫಿ ಪೋಸ್ಟ್ ಮಾಡಿ ಅಂತ ಸಿಕ್ಕಾಪಟ್ಟೆ ಮನವಿಗಳು ಬಂದಿದ್ವು. ಹಾಗಾಗಿ ಯಾಕಾಗಬಾರ್ದು ಅಂತ ಯೋಚಿಸಿದೆ. ಆದ್ರೆ, ವಿಫಲಳಾದೆ..! ಕ್ಯಾಮೆರಾ ಮುಂದೆ ನಿಂತು ಪೋಸ್ ಕೊಡೋದು ನಂಗೆ ಏಲಿಯನ್ ರೀತಿ ಅನಿಸ್ತು..! ಕೆಲವು ಪ್ರಯತ್ನಗಳ ನಂತ್ರ ಬಿಟ್ ಬಿಟ್ಟೆ..! ಸೆಲ್ಫಿಯಲ್ಲಿ ನನ್ನ ನಾಯಿಗಳನ್ನು ಕೂಡ ಸೇರಿಸಿಕೊಳ್ಳೋಕೆ ಪ್ರಯತ್ನಪಟ್ಟೆ.. ಯಾಕಂದ್ರೆ ನಾನೊಬ್ಳೆ ಸೆಲ್ಫಿ ತೆಗೆದುಕೊಳ್ಳೋಕೆ ಕಷ್ಟ ಆಯ್ತು… ಕಿರಿಕಿರಿಯಾಯ್ತು..!
ಆದ್ರೆ ಈಗ ಆ ಎಲ್ಲಾ ಕಷ್ಟಗಳನ್ನು ಅರಿತುಕೊಂಡು ನನ್ನ ಹಿಂದಿನ ಕೆಲವು ಸೆಲ್ಫಿಗಳನ್ನು ಪೋಸ್ಟ್ ಮಾಡಲು ನಿರ್ಧರಿಸಿದೆ… ನನ್ನ ಫೋನ್ನಲ್ಲಿರೋ ಸೆಲ್ಫಿಗಳು ಹೀಗೆ ಕಾಣಿಸುತ್ತವೆ..! ಇದು ವಿಶ್ರಾಂತಿಯಲ್ಲಿರೋ ನನ್ನ ಮುಖ ಅಂತ ನಾನು ಖಚಿತಪಡಿಸಬಲ್ಲೆ..! ಗಮನಿಸಿ…, ಈ ಚಿತ್ರಗಳು ಫೋಟೋಶಾಪ್ ಮಾಡಿರೋದಲ್ಲ.. ಕೆಲವನ್ನು ಕ್ರಾಪ್ ಮಾಡಿರಬಹುದಷ್ಟೇ.. ಅಂತೆಯೇ ದಯವಿಟ್ಟು ಗಮನಿಸಿ… ಈ ಫೋಟೋಗಳಿಗಿಂತಲೂ ನಾನು ಚೆನ್ನಾಗಿದ್ದೇನೆ’’ ಅಂತ ಬರೆದುಕೊಂಡಿದ್ದಾರೆ…!