ಬಿಜೆಪಿ ಸೇರಿದ್ರಾ ರಮೇಶ್​ ಜಾರಕಿಹೊಳಿ?

0
589

ಕೊಪ್ಪಳ: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣವಾಗಿರೋದು ಅವರ ಫೋಟೋ ಬಿಜೆಪಿ ನಾಯಕರ ಫ್ಲೆಕ್ಸ್​​ನಲ್ಲಿ ರಾರಾಜಿಸುತ್ತಿರುವುದು..!

ರಮೇಶ್​ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ  ಬಂಡಾಯವೆದ್ದು  ರಾಜೀನಾಮೆ ನೀಡುವ ಮೂಲಕ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದರು.  ಅವರ ಈ ವರ್ತನೆ ಕಾಂಗ್ರೆಸ್​ ನಾಯಕರ  ಕೆಂಗಣ್ಣಿಗೆ ಗುರಿಯಾಗಿತ್ತು.  ಮೈತ್ರಿ ಪತನದ ಬೆನ್ನಲ್ಲೇ ರಾಜೀನಾಮೆ ಅರ್ಜಿಯ ವಿಚಾರಣೆ ನಡೆಸಿದ್ದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಜಾರಕಿಹೊಳಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. 

ಈ ಎಲ್ಲಾ ಬೆಳವಣಿಗೆಗಳ ನಡುವೆ ರಮೇಶ್​ ಜಾರಕಿಹೊಳಿ ಬಿಜೆಪಿ ಸೇರ್ತಾರೆ ಎಂಬ ಮಾತು ಕೇಳಿ ಬರ್ತಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡುವಂತೆ ರಮೇಶ್​ ಜಾರಕಿಹೊಳಿಯವರ ಭಾವಚಿತ್ರ ಬಿಜೆಪಿ ನಾಯಕರ ಭಾವಚಿತ್ರದೊಂದಿಗೆ ಒಂದೇ ಫ್ಲೆಕ್ಸ್​ನಲ್ಲಿ ರಾರಾಜಿಸುತ್ತಿದೆ. ಕೊಪ್ಪಳದ ಬಿಜೆಪಿ ಯುವ ಮುಖಂಡ ಹಾಲೇಶ್​ ಕಂದಾರಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಅಭಿನಂದನೆ ಸಲ್ಲಿಸಲು ಹಾಕಿರುವ ಫ್ಲೆಕ್ಸ್ ನಲ್ಲಿ ರಮೇಶ್​ ಜಾರಕಿಹೊಳಿ ಫೋಟೋ ಕೂಡ ಇದೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಬಿಜೆಪಿ ಸೇರಿದ್ರಾ ಅನ್ನೋ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಮೂಡಿದೆ. 

LEAVE A REPLY

Please enter your comment!
Please enter your name here