Home ರಾಜ್ಯ ಇನ್ನು ನಾಲ್ವರು ಶಾಸಕರು ನಮ್ಮನ್ನ ಸೇರ್ತಾರೆ- ರಮೇಶ್ ಜಾರಕಿಹೊಳಿ

ಇನ್ನು ನಾಲ್ವರು ಶಾಸಕರು ನಮ್ಮನ್ನ ಸೇರ್ತಾರೆ- ರಮೇಶ್ ಜಾರಕಿಹೊಳಿ

ಮುಂಬೈ : ಇನ್ನೂ ನಾಲ್ವರು ಶಾಸಕರು ಬಂದು ಇವತ್ತು ನಮ್ಮನ್ನ ಕೂಡಿಕೊಳ್ತಾರೆ ಅಂತಾ ಮುಂಬೈನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರು. ನಾವು ಕಾಂಗ್ರೆಸ್ ಕಾರ್ಯಕರ್ತರಾಗಿ ಮುಂದುವರೆಯುತ್ತೇವೆ. ನಾವು ಎಂಎಲ್ಎ ಆಗದೇ ಇದ್ರೂ ಪರವಾಗಿಲ್ಲ . ನಮಗೆ ಯಾವುದೇ ಬಿಜೆಪಿ ಮುಖಂಡರು ದುಡ್ಡು ಕೊಟ್ಟಿಲ್ಲ, ನಾವೂ ಪಡೆದಿಲ್ಲ ಎಂದಿದ್ದಾರೆ.

ಇನ್ನು ಡಿಕೆಶಿ ಮುಂಬೈಗೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಡಿ.ಕೆ. ಶಿವಕುಮಾರ್ ಬಗ್ಗೆ ನಾನು ಹೆಚ್ಚು ಕಮೆಂಟ್ಸ್ ಮಾಡುವುದಿಲ್ಲ . ಅವರನ್ನು ಭೇಟಿಯಾಗಲು ಯಾರೂ ಇಚ್ಛಿಸುವುದಿಲ್ಲ .ಡಿ.ಕೆ. ಶಿವಕುಮಾರ್ ಒಂದು ಸಮಯದಲ್ಲಿ ನನ್ನ ಸ್ನೇಹಿತರಾಗಿದ್ರು . ಆದ್ರೆ ಈಗ ಅವರು ಟ್ರಬಲ್ ಶೂಟರ್ ಆಗಿದ್ದಾರೆ . ಅವರಿಗೆ ಮತ್ತಷ್ಟು ಟ್ರಬಲ್ ಕೊಡಲು ನಮಗೆ ಇಷ್ಟವಿಲ್ಲ. ಎಲ್ಲವನ್ನೂ ಸರಿ ಮಾಡ್ತೇವೆ ಎನ್ನುವುದಾದ್ರೆ ಹೀಗೇಕೆ ಮಾಡ್ತೀರಿ ಎಂದಿದ್ದಾರೆ. ಕಳೆದ ಒಂದು ವರ್ಷದಿಂದ ನಾವು ಇದೇ ಪರಿಸ್ಥಿತಿ ಎದುರಿಸಿದ್ದೇವೆ. ಒಂದು ವರ್ಷದಿಂದ ಇಲ್ಲದೇ ಈಗೇಕೆ ದಿಢೀರನೆ ಬಂದಿದ್ದೀರಿ .ಡಿಕೆಶಿ ಡ್ರಾಮಾ ಮಾಡ್ತಿದ್ದಾರೆ ಅಂತಾ ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಡಿಕೆಶಿ ಮಾತ್ರವಲ್ಲದೇ ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದ್ದಾರೆ. ಶಾಸಕರ ಅನರ್ಹತೆಗೆ ದೂರು ಕೊಟ್ಟಿರುವುದಕ್ಕೆ ಅತೃಪ್ತ ಶಾಸಕರಿಗೆ ಬೇಸರವಿದೆ. ಆದ್ರೆ ಎಲ್ಲಾ ಶಾಸಕರಿಗೂ ಸಿದ್ದರಾಮಯ್ಯ ಬಗ್ಗೆ ಅಪಾರ ಗೌರವವಿದೆ. ಆದ್ರೂ ಸಿದ್ದರಾಮಯ್ಯ ಅವರಿಂದ ಇಂತಹ ನಡೆ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here

- Advertisment -

Most Popular

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಆರ್​ ಸಿ ಬಿ ಕಣಕ್ಕೆ..! ಕಾರಣ ಏನ್ ಗೊತ್ತಾ?

  ದುಬೈ :  13 ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...

Recent Comments