ಸ್ಪೀಕರ್ ನೋಟಿಸ್​ ಹಿನ್ನೆಲೆಯಲ್ಲಿ ಅತೃಪ್ತರಲ್ಲಿ ಹೆಚ್ಚಿದೆ ಆತಂಕ..!

0
173

ಬೆಂಗಳೂರು: ಸ್ಪೀಕರ್​ ರಮೇಶ್​ ಕುಮಾರ್​ ಅವರು ನೋಟಿಸ್​ ಹೊರಡಿಸಿರುವ ಹಿನ್ನೆಲೆ ಅತೃಪ್ತರಲ್ಲಿ ಆತಂಕ ಹೆಚ್ಚಿದೆ. ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶಾಸಕ ಮಹೇಶ್​ ಕುಮಟಳ್ಳಿ ಭೇಟಿ ನೀಡಿದ್ದು, ಮುಂದೇನು‌ ಮಾಡಬೇಕೆಂಬ ಕುರಿತು ಚರ್ಚೆ ಮಾಡಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ರಮೇಶ್ ಮತ್ತು ಮಹೇಶ್ ಕುಮಟಳ್ಳಿ ಅವರು ಅರ್ಧ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದ್ದು, ಕೈ ಅತೃಪ್ತರು ಶಾಸಕ ಸ್ಥಾನದ ಅನರ್ಹತೆ ಭಯದಲ್ಲಿದ್ದಾರೆ.

ಈಗಾಗಲೇ ಉಮೇಶ್ ಜಾಧವ್​ ಅವರು ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರೋ ಕಾಂಗ್ರೆಸ್ ಶಾಸಕರನ್ನು ಉಳಿಸಕೊಳ್ಳೋ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here