Home ಸಿನಿ ಪವರ್ ರಣಗಿರಿ ರಹಸ್ಯ ಭೇದಿಸಲು ರಮೇಶ್ ಅರವಿಂದ್ ರೆಡಿ..!

ರಣಗಿರಿ ರಹಸ್ಯ ಭೇದಿಸಲು ರಮೇಶ್ ಅರವಿಂದ್ ರೆಡಿ..!

ರಮೇಶ್ ಅರವಿಂದ್, ಕನ್ನಡ ಚಿತ್ರರಂಗದ ಜನಪ್ರಿಯ ನಟ.. 1980ರ ದಶಕದಲ್ಲಿ ಸಿನಿಯಾನ ಆರಂಭಿಸಿದ ರಮೇಶ್ ಸ್ಯಾಂಡಲ್​​ವುಡ್​ನ ಎವರ್ ಗ್ರೀನ್ ಹೀರೋ. ರಮೇಶ್ ಅವರನ್ನು ಅವತ್ತಿಂದ ಇವತ್ತಿನವರೆಗೂ ನೋಡುತ್ತಾ ಬಂದವರಿಗೆಲ್ಲಾ ಕಾಡುವ ಸಾಮಾನ್ಯ ಪ್ರಶ್ನೆ ಇವರಿಗೇ ಏಜೇ ಆಗಲ್ವಾ ಅನ್ನೋದು..!
ರಮೇಶ್ ಆ ಮಟ್ಟಿಗೆ ಯಂಗ್ & ಎನರ್ಜಿಟಿಕ್ ಆಗಿದ್ದಾರೆ, ಸಿನಿಮಾ ನಟನೆ, ಡೈರೆಕ್ಷನ್, ಕಿರುತೆರೆ ಕಾರ್ಯಕ್ರಮಗಳು, ಉಪನ್ಯಾಸ ಹೀಗೆ ಸದಾ ಬ್ಯುಸಿ ಆಗಿರೋ ರಮೇಶ್ ಸ್ಯಾಂಡಲ್​​ವುಡ್​ನ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟ, ನಿರ್ದೇಶಕ.
ಅವರೀಗ ‘ರಣಗಿರಿ ರಹಸ್ಯ’ ಭೇದಿಸಲು ಹೊರಟಿದ್ದಾರೆ. ನಮ್ಮ ಸ್ಯಾಂಡಲ್​ವುಡ್​ನ ಹೊಸ ಹೊಸ ಸಿನಿಮಾಗಳು ಬರ್ತಾ ಇವೆ. ಒಂದು ಸಿನಿಮಾಕ್ಕಿಂತ ಇನ್ನೊಂದು ತುಂಬಾ ವಿಭಿನ್ನ. ಬರೀ ಲವ್ ಸ್ಟೋರಿ ಚಿತ್ರಗಳಿಂದಾಚೆಗೆ ಬೇರೆ ಬೇರೆ ರೀತಿ ಚಿತ್ರಗಳು ಬರುತ್ತಿವೆ.
ಅವುಗಳಲ್ಲೂ ಮುಖ್ಯವಾಗಿ ಪತ್ತೇದಾರಿ ಸಿನಿಮಾಗಳು ಸಖತ್ ಸೌಂಡು ಮಾಡ್ತಿವೆ. ಇತ್ತೀಚೆಗೆ ತೆರೆಕಂಡ ಬೆಲ್ಬಾಟಂ ಸಿನಿಮಾ ಗೊತ್ತೇ ಇದೆ. ಈ ಸಿನಿಮಾದಲ್ಲಿ ‘ಕಿರಿಕ್ ಪಾರ್ಟಿ’ ಡೈರೆಕ್ಟರ್ ಡಿಟೆಕ್ಟಿವ್ ದಿವಾಕರನಾಗಿ ಇಷ್ಟವಾದ್ರು. ಅದೊಂದು ಪತ್ತೆದಾರಿ ಸಿನಿಮಾವಾಗಿದ್ದು, ನಗಿಸುತ್ತಲೇ ಕೊನೆ ತನಕ ಪ್ರೇಕ್ಷಕರನ್ನು ಕುತೂಹಲದಿಂದ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
 ಈಗ ಅರ್ಥವಾಗಿರಬಹದು, ರಮೇಶ್ ಅರವಿಂದ್ ಅವರು ಬೇಧಿಸಲು ಹೊರಟಿರೋ ‘ರಣಗಿರಿ ರಹಸ್ಯ’ದ ಬಗ್ಗೆ. ಹೌದು, ರಮೇಶ್ ಅವರು ಡಿಟೆಕ್ಟಿವ್ ಪಾತ್ರದಲ್ಲಿ ನಿಮ್ಮ ಮುಂದೆ ಬರಲು ರೆಡಿಯಾಗಿದ್ದಾರೆ. ಆಕಾಶ್ ಶ್ರೀವತ್ಸವ್ ನಿರ್ದೇಶನದ ‘ಶಿವಾಜಿ ಸುರತ್ಕಲ್’ ಅನ್ನೋ ಮೂವಿಯಲ್ಲಿ ನಮ್ಮ ಎವರ್ ಗ್ರೀನ್ ಹೀರೊ ರಮೇಶ್ ಅವರು ಪತ್ತೇದಾರಿಯಾಗಿ ಮಿಂಚಲಿದ್ದಾರೆ.
ಈ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಈ ಬಗ್ಗೆ ರಮೇಶ್ ಟ್ವೀಟ್ ಕೂಡ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಇದರಲ್ಲಿ ಕುತೂಹಲ ಹುಟ್ಟಿಸೋ ಪತ್ತೇದಾರಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಅಂದಿದ್ದಾರೆ.
ಇನ್ನು ಶಿವಾಜಿ ಸುರತ್ಕಲ್​ಗೆ ರೇಖಾ ಹಾಗೂ ಅನುಪ್ ಗೌಡ ಬಂಡವಾಳ ಹಾಕಿದ್ದಾರೆ. ರಾಧಿಕಾ ಚೇತನ್ ಚಿತ್ರದ ನಾಯಕಿ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಈ ಸಿನಿಮಾ ಒಂದೊಳ್ಳೆ ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆ ಹೊಂದಿದೆ ಎನ್ನಲಾಗಿದ್ದು, ರಣಗಿರಿ ರಹಸ್ಯ ಅನ್ನೋ ಟ್ಯಾಗ್ಲೈನ್ ಈ ಚಿತ್ರಕ್ಕಿದೆ. ರಮೇಶ್ ಅವರು ಭೂತಗನ್ನಡಿ ಹಿಡಿದಿರೋ ಚಿತ್ರ ಈಗಾಗಲೇ ತುಂಬಾ ವೈರಲ್ ಆಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

-ಚರಿತಾ ಪಟೇಲ್

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments