Home P.Special ಕಾಲಲ್ಲೇ ಪರೀಕ್ಷೆ ಬರೆದ ದೊಡ್ಡಬಳ್ಳಾಪುರ ವಿದ್ಯಾರ್ಥಿನಿ

ಕಾಲಲ್ಲೇ ಪರೀಕ್ಷೆ ಬರೆದ ದೊಡ್ಡಬಳ್ಳಾಪುರ ವಿದ್ಯಾರ್ಥಿನಿ

ದೊಡ್ಡಬಳ್ಳಾಪುರ : ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ ಎಂಬ ಗಾದೆ ಮಾತು ಕೇಳೆ ಇರ್ತೀವಿ ಈ ಗಾದೆ ಮಾತಿಗೆ ಅನ್ವಯವಾಗುವಂತೆ ಇಲ್ಲೊಬ್ಬ ವಿದ್ಯಾರ್ಥಿನಿ ತನ್ನ ವೈಪಲ್ಯಗಳನ್ನು ಮೀರಿ ಎರಡು ಪಬ್ಲಿಕ್ ಪರೀಕ್ಷೆಗಳನ್ನು ಬರೆದು ಉತೀರ್ಣಳಾಗಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ವಿದ್ಯಾರ್ಥಿಗಳಿಗೆ ಎಲ್ಲ ಮೂಲ ಭೂತಸೌಕರ್ಯಗಳು ಒದಗಿಸಿದರು ವಿದ್ಯಾಭ್ಯಾಸ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಆದ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪಾಲನಜೋಗನಹಳ್ಳಿ ನಿವಾಸಿ ಸಮೀನಾ ಎಂಬ ವಿದ್ಯಾರ್ಥಿನಿ ಎರಡು ಕೈಗಳು ಇಲ್ಲದೆ ಕಾಲಲ್ಲಿ
ವಿದ್ಯಾಭ್ಯಾಸ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತೀರ್ಣಳಾಗಿದ್ದಾಳೆ . ಸಮೀನಾ ಹುಟ್ಟಿದಾಗಿನಿಂದ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಾಳೆ. ಆದ್ರೂ ಹಿಂಜರಿಯದೆ ತನ್ನ ಛಲದಿಂದ ಕಾಲಲ್ಲೇ ಬರೆಯುವುದನ್ನು ಕಲಿತು. ಜೀವನದಲ್ಲಿ ಎರಡು ಉನ್ನತ ಪರೀಕ್ಷೆಗಳಾದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಎದುರಿಸಿ ಉತೀರ್ಣಳಾಗಿದ್ದಾಳೆ.

ಇನ್ನೂ ಓದುವುದರ ಜೊತೆಗೆ ದಿನನಿತ್ಯದ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ತೀರಾ ತನ್ನ ಕೈಯಲ್ಲಿ ಆಗದ ಕೆಲಸಗಳನ್ನು ತನ್ನ ಅಜ್ಜಿ ಹತ್ತಿರವಿದ್ದು ಮಾಡಿಕೊಡುತ್ತಾಳೆ. ಹುಟ್ಟಿದಾಗಿನಿಂದಲೇ ತನ್ನ ಕೈಗಳನ್ನು ಕಳೆದುಕೊಂಡರು ಎಂದು ವಿದ್ಯಾಭ್ಯಾಸದ ಜೊತೆಗೆ ಇತರೆ
ಚಟುವಟಿಕೆಗಳಲ್ಲಿ ಹಿಂದೆ ಉಳಿಯಲಿಲ್ಲ. ನಿತ್ಯ ಕಾಲೇಜಿಗೆ ತನ್ನ ಅಪ್ಪ ಕರೆದುಕೊಂಡು ಹೋಗುತ್ತಾರೆ. ಸದ್ಯಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಆಗಿರುವ ಸಮೀನಾ ಮುಂದೆಯು ಸಹ ತನ್ನ ವಿದ್ಯಾಭ್ಯಾಸ ಮುಂದುವರಿಸುವ ತವಕದಲ್ಲಿದ್ದಾಳೆ. ಜೀವನದಲ್ಲಿ ಬ್ಯಾಂಕ್ ನಲ್ಲಿ ಕೆಲಸ ಮಾಡುವ ಆಸೆ
ಸಹ ಹೊಂದಿದ್ದಾಳೆ. ಕೈ ಇಲ್ಲದಿದ್ದರು ಈ ಸಾಧನೆಗೆ ಕುಟುಂಬಸ್ಥರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.

ಒಟ್ಟಾರೆ ಸರ್ವೆ ಸಾಮಾನ್ಯವಾಗಿ ಎಲ್ಲ ಐಷಾರಾಮಿ ಸೌಕರ್ಯಗಳನ್ನು ನೀಡಿದರು ಜೀವನದಲ್ಲಿ ತಪ್ಪು ದಾರಿ ಹಿಡಿಯುವ ವಿದ್ಯಾರ್ಥಿಗಳಿಗೆ ಈ ಸಮೀನಾ ಅಂತ ವಿದ್ಯಾರ್ಥಿಗಳು ತಮ್ಮ ವೈಪಲ್ಯಗಳನ್ನು ಮರೆತು ಜೀವನದಲ್ಲಿ ಸಾಧನೆಯ ಹಾದಿ ಹಿಡಿಯುವುದು ಮಾದರಿ ಆಗುತ್ತದೆ. ಇಂತಹ ವಿದ್ಯಾರ್ಥಿಗಳನ್ನು ನೋಡಿ ಇತರೆ ವಿದ್ಯಾರ್ಥಿಗಳು ಕಲಿಯುವುದು ಬಹಳಷ್ಟಿದೆ ಎಂದರೆ ತಪ್ಪಗಲಾರದು.

-ರಾಮಾಂಜಿ.ಎಂ ಬೂದಿಗೆರೆ,  ದೇವನಹಳ್ಳಿ

LEAVE A REPLY

Please enter your comment!
Please enter your name here

- Advertisment -

Most Popular

‘ಉಗ್ರ ಸ್ವರೂಪ ಪಡೆಯುತ್ತಿರುವ ಅನ್ನದಾತರ ಹೋರಾಟ’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರೈತರ ಪ್ರತಿಭಟನೆ ಕ್ಷಣ-ಕ್ಷಣಕ್ಕೂ ಉಗ್ರ ಸ್ವರೂಪ ಪಡೆಯುತ್ತಿದೆ. ರೈತರು ಸಿಂಘು ಬಾರ್ಡ್ ನಿಂದ ದೆಹಲಿ ರಿಂಗ್ ರೋಡ್ ಗೆ...

ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು..!

ಬೆಂಗಳೂರು: ಬೆಂಗಳೂರಿನಲ್ಲಿ ಸಿಡಿದೆದ್ದ ಅನ್ನದಾತರು. ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರೈತರು ಪ್ರತಿಭಟನೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸರು ಹೆಬ್ಬಾಳದ ಮುಖ್ಯ ರಸ್ತೆಗೆ ಬ್ಯಾರಿಕೆಡ್ ಗಳನ್ನು ಹಾಕಿ ತಡೆಹಿಡೆಯಲಾಗಿದೆ. 50ಕ್ಕೂ ಹೆಚ್ಚು ಕಾರು...

‘ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನೆಗೆ ಚಾಲನೆ’

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಿದ್ದಾರೆ. ನಗರದ ಆರು ದಿಕ್ಕೂಗಳಿಂದ ರೈತರು ಬರುತ್ತಿದ್ದಾರೆ. ರಾಷ್ಟ್ರಗೀತೆ ಹಾಡುವ ಮೂಲಕ ರ್ಯಾಲಿಗೆ ಚಾಲನೆ...

‘ದೆಹಲಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್’

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ.   ರೈತರು...

Recent Comments