ರಾಷ್ಟ್ರಮಟ್ಟದಲ್ಲಿ ರಾಮನಗರ ವಿದ್ಯಾರ್ಥಿನಿ ಮಿಂಚು

0
870

ಆಕೆ ಕೃಷಿ ಕುಟುಂಬದ ಬಾಲೆ. ಕೃಷಿಯಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು ಅನ್ನೋದು ಆಕೆಯ ಮಹಾ ಕನಸು. ಕೃಷಿ ಕ್ಷೇತ್ರದಲ್ಲಿನ ಸಾಧಿಸೇ ಸಾಧಿಸ್ತೀನಿ ಅಂತ ಪಣತೊಟ್ಟಿರೋ ಪೋರಿ. ಅದೆಷ್ಟೋ ಬಾರಿ ತನ್ನ ಕನಸನ್ನು ತನ್ನ ಶಿಕ್ಷಕರೊಂದಿಗೆ ಹಂಚಿಕೊಂಡಿದ್ದಾಳೆ. ಶಿಕ್ಷಕರ ಪ್ರೋತ್ಸಾಹದಿಂದ ಸಾಧನೆಯ ಒಂದು ಹಂತವನ್ನು ತಲುಪಿದ್ದಾರೆ. ಚಿಕ್ಕ ವಯಸ್ಸಲ್ಲೇ ರೈತೋಪಯೋಗಿ ಯಂತ್ರವೊಂದನ್ನು ಆವಿಷ್ಕರಿಸಿ ಭೇಷ್ ಎನಿಸಿಕೊಂಡಿದ್ದಾಳೆ.
ಆ ಬಾಲಕಿಯ ಹೆಸ್ರು ರಕ್ಷಿತಾ. ರಾಮನಗರ ಜಿಲ್ಲೆ, ರಾಮನಗರ ತಾಲೂಕಿನ ಹರಿಸಂದ್ರ ಸರ್ಕಾರಿ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ. ಹೊಸಕೋಟೆಯಲ್ಲಿ ನಡೆದ ವಿಭಾಗೀಯ ಮಟ್ಟದ ‘ಇನ್‍ಸ್ಪೈರ್ ಅವಾರ್ಡ್’ ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ. ಮಕ್ಕಳ ಇನ್‍ಸ್ಪೈರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಈ ಕಂದಮ್ಮ.
ಕಳೆದ ಫೆ.22ರಿಂದ ಫೆ.24ರವರೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹರೀಸಂದ್ರ ಪ್ರೌಢಶಾಲೆಯ ಮಕ್ಕಳು ಬಹುಪಯೋಗಿ ಕೃಷಿಯಂತ್ರ ಮಾದರಿಯನ್ನು ಪ್ರದರ್ಶಿಸಿದ್ದರು. ಅತೀ ಸಣ್ಣ ರೈತರುಗಳು, ಮಹಿಳೆಯರಿಗಾಗಿ ಕೃಷಿಪರ ಈ ಯಂತ್ರ ಅತೀ ಕಡಿಮೆ ವೆಚ್ಚದಲ್ಲಿ ಮತ್ತು ವೈಜ್ಞಾನಿಕವಾಗಿ ಸುಧಾರಣೆ ಹೊಂದಿದ ಕೃಷಿಯಂತ್ರ ಇದಾಗಿದ್ದು ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.
ರಕ್ಷಿತಾ.., ಪ್ರತಿದಿನ ಕೃಷಿ ಚಟುವಟಿಕೆ ನಡೆಸಲು ಪರದಾಡುತ್ತಿರುವವರನ್ನು ನೋಡಿ ಏನಾದ್ರೂ ಮಾಡಬೇಕೆಂದು ಯಂತ್ರ ತಯಾರಿಸಿದ್ದಾಳೆ. ಈ ಯಂತ್ರ ಜಮೀನಿನಲ್ಲಿ ಉಳುವ, ಭಿತ್ತುವ, ಗೆರೆ ಹಾಕುವ, ನೀರು ಹಾಕುವ, ಗೊಬ್ಬರ ಹಾಕುವ ಮತ್ತು ಮಣ್ಣು ಮುಚ್ಚುವ ಕಾರ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸಲಿದೆ. ಇದರಿಂದ ರೈತರಿಗೆ ಸಮಯ ಹಾಗೂ ಹಣ ಕೂಡ ಉಳಿತಾಯವಾಗುತ್ತೆ. ಈ ಮೇಲಿನ ಅಂಶಗಳನ್ನು ಪರಿಗಣಿಸಿ ಈ ಯಂತ್ರವನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಇದರಿಂದ ಹರಿಸಂದ್ರ ಸರ್ಕಾರಿ ಪ್ರೌಢಶಾಲೆಯು ರಾಷ್ಟ್ರವನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದೆ. ಈ ಮಾದರಿಯನ್ನು ತಯಾರು ಮಾಡುವುದರಲ್ಲಿ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ. ರಕ್ಷಿತಾ ಸಾಧನೆಗೆ ಶಾಲೆಯ ಶಿಕ್ಷಕರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಇದೇ ತಿಂಗಳು 14 ಮತ್ತು 15 ರಂದು ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಕಾರ್ಯಕ್ರಮ ನಡೆಯಲಿದೆ.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ರಕ್ಷಿತಾ ಹೆಚ್ಚಿನ ಸಾಧನೆ ಮಾಡಲಿ ಎಂಬುದೇ ನಮ್ಮ ಆಶಯ.
-ಪ್ರವೀಣ್ ಗೌಡ, ರಾಮನಗರ

LEAVE A REPLY

Please enter your comment!
Please enter your name here