ಯಶ್ ಓದಿದ ಕಾಲೇಜಿನಲ್ಲಿ ಓದ್ತಿದ್ದಾರೆ ಪುನೀತ್..!

0
355

ರಾಕಿಂಗ್ ಸ್ಟಾರ್ ಯಶ್ ಓದಿದ ಕಾಲೇಜಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಓದ್ತಿದ್ದಾರೆ..! ಅರೆ, ಪುನೀತ್ ಸಿನಿಮಾ ಜೊತೆಗೆ ಎಜುಕೇಷನ್​ ಕೂಡ ಕಂಟಿನ್ಯೂ ಮಾಡಿದ್ರಾ? ಇಲ್ಲ, ಸಿನಿಮಾದಲ್ಲೇ ಕಾಲೇಜು ಮೆಟ್ಟಿಲು ಏರಿರೋ ಸ್ಟೋರಿ ಇದು.
ರಾಕಿಂಗ್ ಸ್ಟಾರ್ ಯಶ್ ‘ರಾಮಾಚಾರಿ’ ಗೆಟಪ್​ನಲ್ಲಿ ಓದಿದ್ದ ಕಾಲೇಜಿನಲ್ಲಿ ಅಪ್ಪು ‘ಯುವರತ್ನ’ನಾಗಿ ಓದ್ತಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾಗಳಲ್ಲಿ ರಾಮಾಚಾರಿ ಕೂಡ ಒಂದು. ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಮೂವಿ ರಿಲೀಸ್ ಆಗಿದ್ದು 2014ರಲ್ಲಿ. ಆ ಸಿನಿಮಾದಲ್ಲಿ ಯಶ್ ಕಾಲೇಜು ವಿದ್ಯಾರ್ಥಿಯಾಗಿ ಅಭಿನಯಿಸಿದ್ದರು. ಕಾಲೇಜಿನ ಚಿತ್ರೀಕರಣವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ. ಈಗ ಪುನೀತ್ ರಾಜ್​ಕುಮಾರ್ ಅವರ ‘ಯುವರತ್ನ’ ಸಿನಿಮಾದ ಶೂಟಿಂಗ್ ಕೂಡ ಅದೇ ಕಾಲೇಜಿನಲ್ಲಿ ನಡೀತಾ ಇದೆ. ಹೀಗಾಗಿ ಅಂದು ‘ರಾಮಾಚಾರಿ’ ಯಶ್ ಓದಿದ ಶಾಲೆಯಲ್ಲಿ ‘ಯುವರತ್ನ’ ಪುನೀತ್ ರಾಜ್​ಕುಮಾರ್ ಓದ್ತಿದ್ದಾರೆ..!
ವಿಶೇಷ ಅಂದ್ರೆ ರಾಮಚಾರಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸಂತೋಷ್​ ಆನಂದ್​ ರಾಮ್​ ಅವರೇ ಯುವರತ್ನನಿಗೂ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ರಾಮಚಾರಿಗೆ ಆಯ್ಕೆ ಮಾಡಿಕೊಂಡಿದ್ದ ಕಾಲೇಜನ್ನೇ ಸಂತೋಷ್ ಯುವರತ್ನಗೂ ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು ಕೆಜಿಎಫ್-2 ಚಿತ್ರೀಕರಣವೂ ಕೂಡ ಕೆಲವು ದಿನಗಳ ಕಾಲ ಮೈಸೂರಲ್ಲಿ ನಡೆದಿತ್ತು. ಈ ವೇಳೆ ಶೂಟಿಂಗ್ ಬಳಿಕ ರಾಕೀಭಾಯಿ ಯಶ್ ಮತ್ತು ಯುವರತ್ನ ಪುನೀತ್ ಒಟ್ಟಿಗೆ ಊಟ ಮಾಡಿದ್ದರು.

LEAVE A REPLY

Please enter your comment!
Please enter your name here