Sunday, June 26, 2022
Powertv Logo
Homeರಾಜ್ಯಟಗರು ಟಗರು ಟಗರು ಟಗರು!

ಟಗರು ಟಗರು ಟಗರು ಟಗರು!

ಬಾಗಲಕೋಟೆ: ಬೆಟ್ಟದ ಹುಲಿ ಎಂದೇ ಖ್ಯಾತಿ ಪಡೆದಿದ್ದ ಬಾಗಲಕೋಟೆ ಜಿಲ್ಲೆಯ ಟಗರೊಂದು ಮೃತಪಟ್ಟಿದ್ದು, ಟಗರಿಗೆ ರಾಜ್ಯ, ಹೊರರಾಜ್ಯದ ಜನ ಭಾವನಾತ್ಮಕ ವಿದಾಯ ಹೇಳಿದ್ದಾರೆ. ಸಂಪ್ರದಾಯ, ವಿಧಿವಿಧಾನಗಳ ಮೂಲಕ ಬಾಗಲಕೋಟೆ ಜಿಲ್ಲೆಯ ಕಲ್ಹಳ್ಳಿಯಲ್ಲಿ ಪಾಂಡು ಗಣಿ ಎಂಬುವವರಿಗೆ ಸೇರಿದ ಟಗರಿನ ಅಂತ್ಯಕ್ರಿಯೆ ನಡೆದಿದೆ.

ಒಂದು ಟಗರು ಸತ್ತಿದ್ದಕ್ಕೆ ಇಷ್ಟೊಂದು ಆಚರೆಣೆಯೆ ಎಂದು ಅಚ್ಚರಿಪಡಬೇಡಿ. ಇದು ಅಂಥಿಂಥ ಟಗರಲ್ಲ. ಬರಿ ಕನಾ೯ಟಕವಲ್ಲದೆ ಮಹಾರಾಷ್ಟ್ರದಲ್ಲೂ ಭಾರಿ ಹೆಸರು ಮಾಡಿತ್ತು ಈ ಟಗರು.  ಟಗರು ಕಾಳಗದಲ್ಲಿ ಬರೋಬ್ಬರಿ 80ಕ್ಕೂ ಅಧಿಕ ಕಡೆಗೆ ನಗದು ಸಹಿತ ಪ್ರಶಸ್ತಿ ಪಡೆದಿತ್ತು. ಈ ಬೆಟ್ಟದ ಹುಲಿಯನ್ನ 2017ರಲ್ಲಿ 5 ಲಕ್ಷ ಹಣ ನೀಡಿ ಪಾಂಡು ಗಣಿ ಎಂಬುವವರು ತಂದಿದ್ದರು. ಮೃತ ಟಗರಿಗೆ ಭಂಡಾರ ಎರಚುತ್ತ ಊರ ತುಂಬ ಮೆರವಣಿಗೆ ಮಾಡಿ ಅಭಿಮಾನಿಗಳು ಶೃದ್ದಾಂಜಲಿ ಸಲ್ಲಿಸಿದರು.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments