‘ಸಪ್ತ ಸಾಗರದಾಚೆ ಎಲ್ಲೋ’ ಹೊರಟ ರಕ್ಷಿತ್ ಶೆಟ್ಟಿ!

0
425

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’ ಹೊರಟಿದ್ದಾರೆ. 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿ ಇರೋ ಅವರು ಯಾವ್ ಕಡೆ ಟ್ರಿಪ್ ಹೊರಟ್ರು? ಅದೂ ಈ ಕೊರೋನಾ ಆತಂಕದ ನಡುವೆ ಅಂತ ಕೇಳ್ತಿದ್ದೀರಾ? ಅವ್ರು ಎಲ್ಲಿಗೂ ಸದ್ಯ ಹೊರಟಿಲ್ಲ… ‘ಸಪ್ತ ಸಾಗರದಾಚೆ ಎಲ್ಲೋ’ ಅನ್ನೋದು ಅವರ ಮುಂದಿನ ಸಿನಿಮಾ! 

ಹೌದು ರಕ್ಷಿತ್ ಶೆಟ್ಟಿ ಅಭಿನಯದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು‘ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ನಿರ್ದೇಶಕ ಹೇಮಂತ್ ರಾವ್​ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅದೇ ಟೀಮ್ ಮತ್ತೊಮ್ಮೆ ಜೊತೆಯಾಗಿ ಬರಲು ಸಿದ್ಧತೆ ಮಾಡಿಕೊಂಡಿದೆ. 

` ಸಪ್ತ ಸಾಗರದಾಚೆ ಎಲ್ಲೋ’ ಎಂಬ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ  ಮಾಡಲಿದ್ದು, ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಕ್ಕೆ  ಹೇಮಂತ್ ರಾವ್ ನಿರ್ದೇಶಿಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಮೂವರು ಒಟ್ಟಾಗಿ ಸಿನಿಮಾ ಮಾಡಲು ಹೊರಟಿದ್ದಾರೆ.

`ಸಪ್ತ ಸಾಗರದಾಚೆ ಎಲ್ಲೋ’   ವಿಭಿನ್ನ ಕಥೆಯನ್ನು ಒಳಗೊಂಡಿದ್ದು, ಇದೊಂದು ಲವ್ ಕಂ ಆ್ಯಕ್ಷನ್ ಸಿನಿಮಾವಾಗಿದೆ  ಎಂದು ಚಿತ್ರತಂಡ ಹೇಳಿದೆ.

LEAVE A REPLY

Please enter your comment!
Please enter your name here