ರಕ್ಷಿತ್ ಶೆಟ್ಟಿ ಅಭಿಯನದ 777 ಚಾರ್ಲಿ ಸಿನಿಮಾ ರಿಲೀಸ್ ಬಗ್ಗೆ ಹಂಚಿಕೊಂಡಿರುವ ಇವರು ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಶೀಘ್ರವೇ ಸಿನಿಮಾ ಬಿಡುಗಡೆ ದಿನಾಂಕವನ್ನು ಹೇಳುತ್ತೇವೆ ಎಂದಿದ್ದಾರೆ.
ವರ್ಷ ಕಳೆದರು ಸಿನಿಮಾಗಳು ರಿಲಿಸ್ ಆಗಿಲ್ಲ.ಈಗ ರಕ್ಷಿತ್ 777 ಚಾರ್ಲಿ ಮೂಲಕ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.ಸಿನಿಮಾದ ಬಿಡುಗಡೆ ದಿನಾಂಕವು ಶೀಘ್ರದಲ್ಲೇ ಘೋಷಣೆಯಾಗಲಿದೆ .777 ಚಾರ್ಲಿ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದ್ದು,ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಮತ್ತು ನಿದೇರ್ಶಕ ಕಾರ್ತಿಕ್ ಅವರು ಸೋಷಿಯಲ್ ಮೀಡಿಯಾದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
777 ಚಾರ್ಲಿ ಕೂಡ ಪ್ಯಾನ್ ಇಂಡಿಯಾ ಸಿನೆಮಾಗಳ ಸಾಲಿಗೆ ಸೇರುತ್ತಿದೆ.ಈ ಚಿತ್ರ ಕಳೆದ ಡಿಸೆಂಬರ್ 31ಕ್ಕೆ ಬಿಡುಗಡೆಯಾಗಬೇಕಿತ್ತು.ಆದರೆ ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆ ಮುಂದೂಡಲಾಗಿತ್ತು ಎಂದು ಹೇಳಿದ್ದಾರೆ.
ಕನ್ನಡ ಮಾತ್ರವಲ್ಲದೆ ತೆಲುಗು,ಮಲಯಾಳಮ,ಹಿಂದಿ ಮತ್ತು ತಮಿಳಿನಲ್ಲೂ 777 ಚಾರ್ಲಿ ಬಿಡುಗಡೆ ಆಗಲಿದೆ.ಈಗ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು,ಸಿನೆಮಾ ಸೆನ್ಸಾರ್ ಅಂಗಳವನ್ನು ದಾಟಿದೆ.ಕಿರಣ್ ರಾಜ್ ಸಿನೆಮಾವನ್ನು ನಿದೇರ್ಶನ ಮಾಡುತ್ತಿದ್ದಾರೆ.ರಕ್ಷಿತ್ ಶೆಟ್ಟಿ,ಸಂಗೀತಾ ಶೃಂಗೇರಿ ರಾಜ್ ಬಿ.ಶೆಟ್ಟಿ ದಾನಿಶ್ ಸೇಟ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.