ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಾಳೆ (ಆಗಸ್ಟ್ 3) ರಾಖಿ ಹಬ್ಬದ ಸಂಭ್ರಮ… ರಾಖಿ ಹಬ್ಬ ಅಂದ್ರೆ ಕೇಳ್ಬೇಕೆ ಮಾರುಕಟ್ಟೆಯಲ್ಲಿ ಸಖತ್ ವೈರೈಟಿ ವೈರೈಟಿ ರಾಖಿಗಳದ್ದೇ ದರ್ಬಾರು..!
ವರ್ಷ ವರ್ಷ ನೂರಾರು ಬಗೆಯ ರಾಖಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತವೆ.. ತಂಗಿಯಂದಿರು ಅಣ್ಣಂದಿರಿಗೆ ಪ್ರೀತಿಯಿಂದ ಚಂದದ ರಾಖಿಯನ್ನು ಕಟ್ಟಿ, ಅವರಿಂದ ಗಿಫ್ಟ್ ಪಡೀತಾರೆ.. ದೇವರ ಚಿತ್ರಗಳಿರೋ ರಾಖಿ, ಕಾರ್ಟೂನ್ ರಾಖಿ ಸೇರಿದಂತೆ ನೀವು ಕೂಡ ಸಾಕಷ್ಟು ಬಗೆ ಬಗೆಯ ರಾಖಿಗಳನ್ನು ನೋಡಿದ್ದೀರಿ. ಆದ್ರೆ, ಇಡ್ಲಿ-ಚೆಟ್ನಿ – ಸಾಂಬರ್, ದೋಸೆ, ಪಿಜ್ಹಾ, ರೈಸ್ ಬಾತ್ ರೀತಿಯ ಕಣ್ಣುಕುಕ್ಕುವ ಸ್ಪೆಷಲ್ ರಾಖಿಗಳನ್ನು ಕಂಡಿದ್ದೀರಾ?
ಈ ಬಾರಿ ಅಂಥಾ ರಾಖಿಗಳು ಮಾರುಕಟ್ಟೆಯಲ್ಲಿ ಹವಾ ಕ್ರಿಯೇಟ್ ಮಾಡಿವೆ. ನೋಡಲು ಇಡ್ಲಿ, ಸಾಂಬರ್, ಪಿಜ್ಹಾ, ಬರ್ಗರ್, ರೈಸ್ಬಾತ್ನಂತೆಯೇ ಕಾಣುವ ರಾಖಿಗಳು ಆಕರ್ಷಿಸುತ್ತಿವೆ.
10 ರೂನಿಂದ ಹಿಡಿದು 500 ರೂವರೆಗೂ ಈ ರಾಖಿಗಳಿದ್ದು, ರಾಖಿ ಖರೀದಿ ಭರಾಟೆ ಫುಲ್ ಜೋರಾಗಿದೆ. ಈ ರಾಖಿಗಳು ನಿಮ್ಮ ಗಮನ ಸೆಳೆಯೋದ್ರಲ್ಲಿ ನೋ ಡೌಟ್..
-ಸ್ವಾತಿ ಪುಲಗಂಟಿ