Saturday, May 28, 2022
Powertv Logo
Homeಸಿನಿಮಾವರ್ಲ್ಡ್​ವೈಡ್​ ರಾಕಿಂಗ್ ರೆಕಾರ್ಡ್ ಮಾಡಿದ ರಾಕಿಭಾಯ್ ಚಿತ್ರ

ವರ್ಲ್ಡ್​ವೈಡ್​ ರಾಕಿಂಗ್ ರೆಕಾರ್ಡ್ ಮಾಡಿದ ರಾಕಿಭಾಯ್ ಚಿತ್ರ

ಏಪ್ರಿಲ್ 14 ರಂದು ರಿಲೀಸ್ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಸೂಪರ್ ಸಕ್ಸಸ್ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ನಿರೀಕ್ಷೆಗೂ ಮೀರಿ ಗೆಲುವು ಕಂಡಿದ್ದು, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ಬರೆದಿದೆ.

ಕೆಜಿಎಫ್ 2 ಸಿನಿಮಾ ಬಿಡುಗಡೆ ಆದ ಬಳಿಕ ಸಾಲು ಸಾಲು ನಾಲ್ಕು ದಿನಗಳ ರಜೆ ಇದ್ದದ್ದು ಸಿನಿಮಾ ಕಲೆಕ್ಷನ್​ಗೆ ಪ್ಲಸ್ ಪಾಯಿಂಟ್ ಆಗಿದೆ. ಬಿಡುಗಡೆಯಾದ ಮೊದಲ ದಿನವೇ 165 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ಕೆಜಿಎಫ್ 2 ಸಿನಿಮಾ ನಾಲ್ಕು ದಿನಗಳಲ್ಲಿ 550 ಕೋಟಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಕೆಜಿಎಫ್ 2 ದಿಗ್ವಿಜಯ ಸಾಧಿಸಿದ್ದು 500 ಕೋಟಿ ಕ್ಲಬ್ ಸೇರೋ ಮೂಲಕ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ.

ಕೆಜಿಎಫ್ 2 ಸಿನಿಮಾ ಈ ನಾಲ್ಕು ದಿನಗಳ ಹಲವು ದಾಖಲೆಗಳನ್ನು ಬರೆದಿದೆ. ಏಪ್ರಿಲ್ 15ರಿಂದ 17ರ ವರೆಗೆ ಅತೀ ಹೆಚ್ಚು ಗಳಿಕೆ ಕಂಡ ವಿಶ್ವದ ಎರಡನೇ ಸಿನಿಮಾ ಎಂದು ಕಾಮ್‌ಸ್ಕೋರ್‌ ವರದಿ ಮಾಡಿದೆ. ಟ್ರೇಡ್ ಅನಲಿಸ್ಟ್ ರಮೇಶ್​ ಬಾಲ ಈ ಮಾಹಿತಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಕೆಜಿಎಫ್ 2 ಸಿನಿಮಾ ಹೊಸ ರೆಕಾರ್ಡ್ ಮಾಡಿದೆ. ಅಲ್ಲಿ ಚಿತ್ರ ಬಿಡುಗಡೆಯಾದ ಫಸ್ಟ್ ಡೇ 53 ಕೋಟಿ. ಎರಡನೇ ದಿನ 45.7 ಕೋಟಿ, ಮೂರನೇ ದಿನ 42.50 ಕೋಟಿ, ನಾಲ್ಕನೇ ದಿನವೂ 45-50 ಕೋಟಿ ಗಳಿಸಿರಬಹುದೆಂದು ಅಂದಾಜಿಸಲಾಗಿದೆ. ಒಟ್ಟಾರೆ ಬಾಲಿವುಡ್‌ನಲ್ಲೇ 200 ಕೋಟಿ ದಾಟಿದೆ.

ಒಟ್ಟಾರೆ ಕೆಜಿಎಫ್ 2 ಸಿನಿಮಾ ತೆರೆಕಂಡ ಮೊದಲ ವಾರದಲ್ಲೇ 500 ಕೋಟಿ ಕ್ಲಬ್ ಸೇರಿದ್ದು, ಕನ್ನಡ ಚಿತ್ರರಂಗದ ಬಗ್ಗೆ ಪರಭಾಷಿಗರೂ ಹೆಮ್ಮೆ ಪಡುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ರಾಕಿಂಗ್ ಸ್ಟಾರ್ ಸಿನಿಮಾ ಇನ್ನೇನೆಲ್ಲಾ ದಾಖಲೆಗಳನ್ನು ಬರೆಯಲಿದ್ಯೋ ನೋಡ್ಬೇಕು.

- Advertisment -

Most Popular

Recent Comments