Home ಲೈಫ್ ಸ್ಟೈಲ್ ಸೋದರನ ರಕ್ಷೆಯನ್ನು ನೋಡಿ ರಾಖಿಯನ್ನು ಕಟ್ಟಬೇಕು. ಇದು ಆಡಂಬರದ ಹಬ್ಬ ಆಗಬಾರದು

ಸೋದರನ ರಕ್ಷೆಯನ್ನು ನೋಡಿ ರಾಖಿಯನ್ನು ಕಟ್ಟಬೇಕು. ಇದು ಆಡಂಬರದ ಹಬ್ಬ ಆಗಬಾರದು

ಇಂದು ದೇಶದೆಲ್ಲೆಡೆ ರಕ್ಷಾಬಂಧನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಕೊರೋನ ನಡುವೆಯೂ ಇಂದು ದೇಶದೆಲ್ಲೆಡೆ ತಮ್ಮ ಮನೆಗಳಲ್ಲಿಯೇ ಸೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಲಾಗುತ್ತಿದೆ.

ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವು ಕೂಡ ವಿಭಿನ್ನ ಹಾಗೂ ವಿಷೇಶ .ಎಲ್ಲರ ನೆಚ್ಚಿನ ರಾಖಿ ಹಬ್ಬ ಸಂಬಂಧದ ಬಂಧವನ್ನು ದಾರದಲ್ಲಿ ಬಂಧಿಸಿ ಹಬ್ಬವಾಗಿದೆ. ತಂಗಿ ತನ್ನ ಅಣ್ಣನಿಗೆ “ಸದಾ ನಿನಗೆ ರಕ್ಷಣೆಯಾಗಿರುತ್ತೇನೆ” ಎಂಬ ಸಂದೇಶವನ್ನು ಕೇಸರಿ ದಾರವನ್ನು ಕಟ್ಟುವ ಮೂಲಕ ವ್ಯಕ್ತಪಡಿಸುತ್ತಾಳೆ. ಇಂತಹ ಅರ್ಥಗರ್ಭಿತ ಆಚರಣೆಯನ್ನು ನಮ್ಮ ದೇಶದಲ್ಲಿ ಮಾತ್ರ ನೋಡಲು ಸಾಧ್ಯ.

ಅದರಲ್ಲೂ ಉತ್ತರ ಭಾರತದ ಮಂದಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ . ಆದ್ರೆ ಸದ್ಯ ಇತ್ತೀಚಿನ ದಿನಗಳಲ್ಲಿ ಹಬ್ಬ ಪ್ರತಿಷ್ಠಿತಯ ಸಂಕೇತವಾಗಿ ಬಿಟ್ಟಿದೆ . ದುಬಾರಿ ರಕ್ಷೆಯನ್ನು ಮಾರುಕಟ್ಟೆಯಲ್ಲಿ ಕೊಳ್ಳುವುದೂ, ದರವನ್ನು ನೋಡಿ ದಾರವನ್ನು ಖರೀದಿಸುವ ಕಾಲ ಬಂದಿದೆ .

ಒಟ್ಟಾರೆಯಾಗಿ ಈ ರಕ್ಷಾಬಂಧನದ ದಿನ ರಾಕಿ ಕಟ್ಟುವಾಗ ಅದರ ದರ ನೋಡಿ, ಅಂದವನ್ನು ನೋಡಿ ರಾಕಿ ಕಟ್ಟುವ ಬದಲು ಸಹೋದರನ ರಕ್ಷೆಯನ್ನು ನೋಡಿ ರಾಕಿಯನ್ನು ಕಟ್ಟಬೇಕು. ಕೊರೊನಾ ಇರುವುದರಿಂದ ಮನೆಯಲ್ಲೇ ರಾಕಿಯನ್ನು ತಯಾರಿಸಿ ನಿಮ್ಮ ಅಣ್ಣ ನಿಗೆ ರಾಕಿ ಕಟ್ಟುವುದು ಶ್ರೇಷ್ಠ.

ಸ್ವಾತಿ ಪುಲಗಂಟಿ

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments