ನವದೆಹಲಿ : ಭಾರತ ಮತ್ತು ಚೀನಾ ನಡುವೆ ಲಡಾಖ್ನಲ್ಲಿ ಗಡಿ ಬಿಕ್ಕಟ್ಟು ಇನ್ನೂ ಕೂಡ ಶಮನವಾಗಿಲ್ಲ. ಹೀಗಾಗಿ ಗಡಿ ಪರಿಸ್ಥಿತಿ ಮತ್ತು ಭದ್ರತೆ ಬಗ್ಗೆ ತಿಳಿದುಕೊಳ್ಳಲು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಇಂದು ಲೆಹ್ಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಸೇನಾಪಡೆಯ ಪ್ಯಾರಾ ಡ್ರಾಪಿಂಗ್ ಎಕ್ಸರ್ಸೈಜ್ ವೀಕ್ಷಣೆ ಮಾಡಿದ್ರು. ಅಷ್ಟೇ ಅಲ್ದೆ ಪೀಕಾ ಮಷೀನ್ ಗನ್ ಪರಿಶೀಲಿಸಿದ್ರು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರಾವಣೆ ರಾಜನಾಥ್ ಸಿಂಗ್ ಅವರೊಡನೆ ಲೆಹ್ನ ಸ್ಟಾಕ್ನಾಗೆ ಹೋಗಿದ್ದಾರೆ.