ಹುತಾತ್ಮರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಗೃಹಸಚಿವರು

0
324

ದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಹಾಗೂ ಜಮ್ಮು ಕಾಶ್ಮೀರದ ಮುಖ್ಯ ಪೊಲೀಸ್ ಅಧಿಕಾರಿ ದಿಲ್​ಬಾಗ್​​​ ಸಿಂಗ್​ ಅವರು ಹುತಾತ್ಮರಾದ ಸಿಆರ್​ಪಿಎಫ್​ ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು. ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ಗೌರವ ಸಲ್ಲಿಸುವ ಸಂದರ್ಭ ರಾಜನಾಥ್​ ಸಿಂಗ್​ ಇತರ ಅಧಿಕಾರಿಗಳೊಂದಿಗೆ ಪಾರ್ಥಿವ ಶರೀರಕ್ಕೆ ಹೆಗಲು ನೀಡಿ ಗೌರವ ಅರ್ಪಿಸಿದ್ದಾರೆ.

ಉಗ್ರರ ದಾಳಿಗೆ ಪ್ರತಿಯಾಗಿ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡುತ್ತದೆ ಎಂಬ ಭರವಸೆಯನ್ನು ನೀಡಿದ ಗೃಹ ಸಚಿವರು, ರಾಷ್ಟ್ರಧ್ವಜ ಹೊದಿಸಲಾದ ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು. ಮಧ್ಯಾಹ್ನ 2 ಗಂಟೆಗೆ ರಾಜನಾಥ್​ ಸಿಂಗ್ ಅವರು ಶ್ರೀನಗರ ತಲುಪಿದ್ದು, ಬಡ್ಗಾಂಗೆ ತೆರಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here