ಮುತ್ತುರಾಜ್ ಅವರಿಗೆ ರಾಜ್​ಕುಮಾರ್ ಅಂತ ಹೆಸರಿಟ್ಟಿದ್ದು ಆ ಸ್ಟಾರ್ ಡೈರೆಕ್ಟರ್..!

0
339

ಸ್ಯಾಂಡಲ್ ವುಡ್ ದೇವರು ಡಾ. ರಾಜ್​​ಕುಮಾರ್ ಬಗ್ಗೆ ಯಾರ್ಗೆ ತಾನೆ ಗೊತ್ತಿಲ್ಲ?  ರಾಜ್ ಅವರು ಕೇವಲ ವ್ಯಕ್ತಿ ಅಲ್ಲ. ಅವ್ರು ಶಕ್ತಿ!  ನಿಮ್ಗೆ ಗೊತ್ತೇ ಇದೆ ಅಲ್ವಾ? ರಾಜ್ ಅವರ ಮೊದಲ ಹೆಸರು ಮುತ್ತುರಾಜ್ ಅಂತ.  ಮುತ್ತುರಾಜ್ ಆಗಿದ್ದ ಡಾ.ರಾಜ್ , ರಾಜ್​ಕುಮಾರ್ ಆಗಿದ್ದು ಹೇಗೆ?‌ ರಾಜ್​ಕುಮಾರ್ ಅಂತ ಮುತ್ತುರಾಜ್ ಗೆ ನಾಮಕರಣ ಮಾಡಿದವ್ರು ಯಾರು ಅಂತೇನಾದ್ರು ಗೊತ್ತಿದೆಯೇ?

ಅದು 1953, ಆಗಷ್ಟೇ ಮುತ್ತುರಾಜ್ ಪಾರ್ವತಮ್ಮ ಅವರನ್ನು ಮದ್ವೆ ಆಗಿದ್ದರು. ರಾಜ್ ದಂಪತಿ ಮೈಸೂರಿಗೆ ಹೊರಟು ನಂಜನಗೂಡು ರೈಲ್ವೆ ಸ್ಟೇಷನಲ್ಲಿದ್ದರು. ಆಗ ಹೆಚ್. ಎಲ್.ಎನ್. ಸಿಂಹ ಕೂಡ ಮೈಸೂರಿಗೆ ಹೋಗೋಕೆ ಅಂತ ಅಲ್ಲಿಗೆ ಬಂದ್ರು.  ಚಿಕ್ಕಂದಿನಿಂದ ಸಿಂಹ ಅವರಿಗೆ ರಾಜ್ ಅವರ ಪರಿಚಯ ಇದ್ದಿದ್ರಿಂದ ನವದಂಪತಿಯನ್ನು ಮಾತಾಡ್ಸಿದ್ರು.

ಆ ಟೈಮಲ್ಲಿ ಸಿಂಹ ಕಣ್ಣಪ್ಪನ ಪಾತ್ರಕ್ಕೆ ಅಂತ ಹೊಸ ಆ್ಯಕ್ಟರನ್ನು ಹುಡುಕ್ತಾ ಇದ್ರು. ರೈಲ್ವೆ ಸ್ಟೇಷನ್ ನಲ್ಲಿ ರಾಜ್ ಅವರನ್ನು ಕಂಡಾಗ, ಇವರೇ ಏಕೆ ಕಣ್ಣಪ್ಪ ಆಗ್ಬಾರ್ದು ಅಂತ ಸಿಂಹ ಅವ್ರ ತಲೇಲಿ ಯೋಚ್ನೆಯೊಂದು ಬಂತು.‌ ರಾಜ್ ಅವರ ಅಡ್ರಸ್ ಪಡೆದು ವಿಶ್ ಮಾಡಿ ಕಳುಹಿಸಿದ್ರು ಸಿಂಹ. ಆದ್ರೆ ಅಲ್ಲಿ ತನಗೆ ಅನಿಸಿದ್ದನ್ನು ಅವ್ರು ಹೇಳಿರ್ಲಿಲ್ಲ.

ಹೀಗೆ ಒಂದ್ ದಿನ ಮೈಸೂರಿನ ಟೌನ್ ಹಾಲ್ ನಲ್ಲಿ ಬೇಡರ ಕಣ್ಣಪ್ಪ ನಾಟಕ ಇತ್ತು. ಆ ನಾಟಕದಲ್ಲಿ ಮುತ್ತುರಾಜ್ ಕಣ್ಣಪ್ಪ ಅಂತ ಸಿಂಹ ಅವರ ಗಮನಕ್ಕೆ ಬಂತು. ನಾಟಕ ನೋಡೋಕೆ ಟೌನ್ ಹಾಲ್ ಕಡೆ ಹೋದ್ರು. ರಾಜ್ ಮಾತ್ರ ಸಿಂಹ ಅವರಿಗೆ ತುಂಬಾ ಇಷ್ಟ ಆಯ್ತು. ‘ಬೇಡರ ಕಣ್ಣಪ್ಪ’ ಸಿನಿಮಾಕ್ಕೆ ಇವರೇ ಸರಿಯಾದವರು ಅಂತ ಡಿಸೈಡ್ ಮಾಡಿದ್ರು. ಪ್ರೊಡ್ಯೂಸರ್ ಎ.ವಿ.ಎಂ ಚೆಟ್ಟಿಯಾರ್ ಮತ್ತು ಕೋ ಪ್ರೊಡ್ಯೂಸರ್ ಗುಬ್ಬಿ ವೀರಣ್ಣ ಅವರಿಗೆ ವಿಷ್ಯ ಹೇಳಿದ್ರು. ಅವರಿಬ್ಬರೂ ಕೂಡ ರಾಜ್ ಅವರೇ ಕಣ್ಣಪ್ಪ ಅಂತ ಫಿಕ್ಸ್ ಆದ್ರು.

ಸ್ಕ್ರೀನ್ ಟೆಸ್ಟ್ ನಡೀತು. ಮುತ್ತುರಾಜ್ ಕಣ್ಣಪ್ಪ ಪಾತ್ರಕ್ಕೆ ಆಯ್ಕೆಯೂ ಆದರು. ಅವತ್ತೇ ಹೆಚ್. ಎಲ್ ಸಿಂಹ ಅವರು ಮುತ್ತುರಾಜ್ ಅವರಿಗೆ ರಾಜ್​​ಕುಮಾರ್ ಅಂತ ಹೆಸರಿಟ್ರು. ಹೀಗೆ ಅಂದಿನಿಂದ ಮುತ್ತುರಾಜ್, ರಾಜ್ ಕುಮಾರ್ ಆದ್ರು.

LEAVE A REPLY

Please enter your comment!
Please enter your name here