Home ಸಿನಿ ಪವರ್ ಅಭಿಮಾನಿಯ ಪಾದ ಹಿಡಿದು ಪ್ರೀತಿ ತೋರಿದ ಸೂಪರ್ ಸ್ಟಾರ್!

ಅಭಿಮಾನಿಯ ಪಾದ ಹಿಡಿದು ಪ್ರೀತಿ ತೋರಿದ ಸೂಪರ್ ಸ್ಟಾರ್!

ಸ್ಟಾರ್ ಗಳನ್ನು ಕಂಡರೆ ಹುಚ್ಚೆದ್ದು ಕುಣಿಯೋ ಅಭಿಮಾನಿಗಳನ್ನು ನೋಡಿರ್ತೀರಾ. ಸಿನಿಮಾ ಹೀರೋಗಳನ್ನು ಭೇಟಿ ಮಾಡಲು ತುದಿಗಾಲಲ್ಲಿ ನಿಂತಿರ್ತಾರೆ. ಈ ವ್ಯಕ್ತಿ ಕೂಡಾ ಹಾಗೆನೇ ಸೂಪರ್ ಸ್ಟಾರ್ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಅವರನ್ನು ಒಮ್ಮೆಯಾದ್ರೂ ಭೇಟಿಯಾಗಬೇಕು ಅನ್ನೋದು ಆತನಾಸೆ. ಈಗ ಆತನ ಇಚ್ಛೆಯನ್ನು ರಜನಿಕಾಂತ್ ನೆರವೇರಿಸಿದ್ದಾರೆ. ಅಷ್ಟೇ ಅಲ್ಲ ರಜನಿಕಾಂತ್ ವಿಶೇಷಚೇತನನ  ಷೇಕ್ ಹ್ಯಾಂಡ್​ ರೀತಿಯಲ್ಲಿ ಪಾದ ಹಿಡಿದು ಪ್ರೀತಿ ತೋರಿದ್ದಾರೆ. ಆ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು, ವಿಶೇಷಚೇತನನಾಗಿದ್ದರೂ ಚಿತ್ರಕಲಾವಿದನಾಗಿ ಎಲ್ಲರ ಗಮನ ಸೆಳೆದಿರುವವರ ಪ್ರಣವ್ ಅವರನ್ನು ರಜನಿ ಭೇಟಿಯಾಗಿದ್ದಾರೆ. ಕೈಗಳಿಲ್ಲದ ಪ್ರಣವ್ ತನ್ನ ಎಲ್ಲಾ ಕೆಲಸಗಳನ್ನು ತನ್ನ ಕಾಲುಗಳಿಂದಲೇ ಮಾಡುತ್ತಾರೆ. ವರ್ಣಚಿತ್ರ ಕಲಾ ಪ್ರಪಂಚದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾರೆ. ಈ ಹಿಂದೆ ಕೇರಳದಲ್ಲಿ  ಪ್ರವಾಹ ಉಂಟಾದಾಗ ಪ್ರಣವ್ ತಾನು ರಿಯಾಲಿಟಿ ಶೋ ನಲ್ಲಿ ಗೆದ್ದ ಹಣವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಕೈಗೆ  ನೀಡಿದ್ದರು. ಗೆದ್ದ ಹಣವನ್ನು ತಾನು ಉಪಯೋಗಿಸದೇ ನಿರಾಶ್ರಿತರಿಗಾಗಿ  ನೀಡಿದ್ದರಿಂದ ಸುದ್ದಿಯಲ್ಲಿದ್ದರು. ಈಗ ರಜನಿಕಾಂತ್ ಜೊತೆಗೆ  ಸೆಲ್ಫಿ ಕ್ಲಿಕ್ಕಿಸಿಕೊಂಡು ಸುದ್ದಿಯಾಗಿದ್ದಾರೆ. ಪ್ರಣವ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದು, ರಜನಿಕಾಂತ್ ಅವರ ಭಾವಚಿತ್ರವನ್ನು ಚಿತ್ರಿಸಿ ಅವರಿಗೆ  ಗಿಫ್ಟಾಗಿ ನೀಡಿದ್ದಾರೆ. ಅಲ್ಲದೆ ಪ್ರಣವ್ ಅವರ ಪಾದವನ್ನುಹಿಡಿದು ಷೇಕ್ ಹ್ಯಾಂಡ್ ಮಾಡೋ ಹಾಗೇ ಪೋಸ್ ಕೊಟ್ಟು   ಕ್ಲಿಕ್ಕಿಸಿಕೊಂಡ  ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

Lovely pics of Thalaivar with the differently abled Kerala Artist Pranav 😍😍😍😍 watta stunning painting by him 🔥🔥👌👌👌👌 such…

Posted by Rajnikanth on Monday, December 2, 2019

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments